ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

39 ಲಕ್ಷ ಟಿಕೆಟ್ ರದ್ದು, ಪ್ರಯಾಣಿಕರಿಗೆ ₹660 ಕೋಟಿ ವಾಪಸ್ ಮಾಡಲಿದೆ ರೈಲ್ವೆ 

Last Updated 15 ಏಪ್ರಿಲ್ 2020, 14:25 IST
ಅಕ್ಷರ ಗಾತ್ರ

ನವದೆಹಲಿ: ಏಪ್ರಿಲ್ 15ರಿಂದ ಮೇ 3ರ ವರೆಗೆ ಕಾಯ್ದಿರಿಸಿದ್ದ 39 ಲಕ್ಷ ಟಿಕೆಟ್‌ಗಳನ್ನ ರದ್ದು ಮಾಡಿದ್ದರಿಂದ ಭಾರತೀಯ ರೈಲ್ವೆಯ ಸುಮಾರು ₹660 ಕೋಟಿ ಆದಾಯಕ್ಕೆ ಪೆಟ್ಟು ಬಿದ್ದಿದೆ. ಲಾಕ್‌ಡೌನ್ ಅವಧಿ ವಿಸ್ತರಣೆಯಾಗಿರುವುದರಿಂದ ಮೇ.3ರ ವರೆಗೆ ರೈಲು ಸಂಚಾರ ರದ್ದಾಗಿದ್ದು, ಈಗಾಗಲೇ ಟಿಕೆಟ್ ಕಾದಿರಿಸಿದ್ದರೆ ಟಿಕೆಟ್ ರದ್ದು ಮಾಡಿ ಹಣವನ್ನು ವಾಪಸ್ ನೀಡಲಾಗುತ್ತದೆ.

ಇಲ್ಲಿಯವರೆಗೆ ವಾಪಸ್ ಕೊಡಬೇಕಾಗಿರುವ ಹಣ ₹660 ಕೋಟಿಯಷ್ಟಿದೆ.ಏಪ್ರಿಲ್ 15 ಮತ್ತು ಮೇ 3ರ ನಡುವೆ ಸುಮಾರು 39 ಲಕ್ಷ ಟಿಕೆಟ್‌ಗಳು ಬುಕ್ಕಿಂಗ್ ಆಗಿವೆ ಎಂದು ಪಿಟಿಐ ಜತೆ ಮಾತನಾಡಿದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಲಾಕ್‍ಡೌನ್ ವಿಸ್ತರಿಸಿರುವುದರಿಂದ ಆ ಕಾಲಾವಧಿಯಲ್ಲಿ ಟಿಕೆಟ್ ಕಾಯ್ದಿರಿಸಿರುವ ಎಲ್ಲ ಪ್ರಯಾಣಿಕರಿಗೂ ಟಿಕೆಟ್‌ನ ಪೂರ್ತಿ ಹಣ ವಾಪಸ್ ಮಾಡಲಾಗುವುದು. ಆನ್‌ಲೈನ್ ಮೂಲಕ ಟಿಕೆಟ್ ಕಾಯ್ದಿರಿಸಿದವರಿಗೆ ಬ್ಯಾಂಕ್ ಖಾತೆಗೆ ಹಣ ವಾಪಸ್ ಆಗಲಿದ್ದು, ಟಿಕೆಟ್ ಕೌಂಟರ್‌ಗೆ ಹೋಗಿ ಟಿಕೆಟ್ ಖರೀದಿಸಿದ್ದವರು ಜುಲೈ31ರ ವರೆಗೆ ಹಣ ವಾಪಸ್ ಪಡೆಯಬಹುದಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT