ಭಾನುವಾರ, ಆಗಸ್ಟ್ 1, 2021
26 °C

ರಾಜಸ್ಥಾನ: ಮಾಸ್ಕ್ ಧರಿಸುವ ವಿಚಾರಕ್ಕೆ ಜಗಳ, ಪೊಲೀಸರ ಬಟ್ಟೆ ಹರಿದ ವ್ಯಕ್ತಿ ಅಂದರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಸ್ಥಾನ: ಮಾಸ್ಕ್ ಧರಿಸದಿರುವುದನ್ನು ಪ್ರಶ್ನಿಸಿದ ಪೊಲೀಸ್ ಅಧಿಕಾರಿಯ ಜೊತೆ ವ್ಯಕ್ತಿಯೊಬ್ಬ ವಾಗ್ವಾದ ನಡೆಸಿ ಪೊಲೀಸ್ ಸಮವಸ್ತ್ರ ಹರಿದು ಹಾಕಿದ ಪರಿಣಾಮ ಬಂಧಿತನಾಗಿರುವ ಪ್ರಸಂಗ ನಡೆದಿದೆ.

ಇಲ್ಲಿನ ಜೋಧ್‌‌ಪುರದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ನಡೆದು ಹೋಗುತ್ತಿರುವುದನ್ನು ನೋಡಿದ ಪೊಲೀಸರು ಆತನನ್ನು ತಡೆದು ಮಾಸ್ಕ್ ಹಾಕದಿರುವುದರ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ಪೊಲೀಸರ ಜೊತೆ ಆತ ಜಗಳಕ್ಕೆ ನಿಂತಿದ್ದಾನೆ.

ಈ ಸಮಯದಲ್ಲಿ ಪೊಲೀಸರು ಹಾಗೂ ಆ ವ್ಯಕ್ತಿಯ ನಡುವೆ ಮಾತಿಗೆ ಮಾತು ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಒಂದು ಹಂತದಲ್ಲಿ ಆ ವ್ಯಕ್ತಿ ಪೊಲೀಸರ ಸಮವಸ್ತ್ರಕ್ಕೆ ಕೈ ಹಾಕಿ ಹರಿದು ಹಾಕಿದ್ದಾನೆ. ಅಲ್ಲದೆ, ವಿಷಯದ ಗಂಭೀರತೆಯನ್ನು ಅರಿತ ಅಕ್ಕಪಕ್ಕದ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಈತನ ವಿರುದ್ಧ ಈ ಹಿಂದೆಯೇ ತನ್ನ ತಂದೆಯ ಕಣ್ಣಿಗೆ ಹೊಡೆದ ಆರೋಪವಿದ್ದು ಪ್ರಕರಣವೊಂದು ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು