ಗುರುವಾರ , ಏಪ್ರಿಲ್ 9, 2020
19 °C

'ಮಹಾ' ಸಿಎಂ ಉದ್ಧವ್ ಠಾಕ್ರೆ ಪತ್ನಿ ರಶ್ಮಿ ‘ಸಾಮ್ನಾ’ ಸಂಪಾದಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಅಚ್ಚರಿಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಅವರು ಶಿವಸೇನಾ ಮುಖವಾಣಿ ‘ಸಾಮ್ನಾ’ ಪತ್ರಿಕೆಯ ಸಂಪಾದಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಉದ್ಧವ್ ಅವರ ಆಪ್ತ ಸಂಜಯ್ ರಾವುತ್ ಅವರು ಪತ್ರಿಕೆಯ ಕಾರ್ಯನಿರ್ವಾಹಕ ಸಂಪದಾಕರಾಗಿ ಮುಂದುವರಿಯಲಿದ್ದಾರೆ. ಗ್ರೂಪ್ ಎಡಿಟರ್ ರಾಜೇಂದ್ರ ಭಗತ್ ಅವರು ಭಾನುವಾರ ಪತ್ರಿಕೆಯಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ. 

ಶಿವಸೇನಾ ಮುಖ್ಯಸ್ಥರಾಗಿದ್ದ ಬಾಳಾ ಠಾಕ್ರೆ ಅವರು 1983ರಲ್ಲಿ ಮರಾಠಿ ಭಾಷೆಯ ಪತ್ರಿಕೆ ಆರಂಭಿಸಿದ್ದರು. ಪತ್ರಿಕೆಯ ಹಿಂದಿ ಆವೃತ್ತಿ ‘ದೊಪಹರ್ ಕ ಸಾಮ್ನಾ’ 1993ರಲ್ಲಿ ಆರಂಭವಾಗಿತ್ತು. ಈ ಎರಡೂ ಪತ್ರಿಕೆಗಳು ಪ್ರಭೋದನ ಪ್ರಕಾಶನದ ಅಡಿ ಪ್ರಕಟಗೊಳ್ಳುತ್ತಿವೆ. ಠಾಕ್ರೆ ಕುಟುಂಬಕ್ಕೆ ಹತ್ತಿರವಾಗಿರುವ ಸುಭಾಷ್ ದೇಸಾಯಿ, ಲೀಲಾಧರ ಡಾಕೆ ಅವರು ಪತ್ರಿಕೆಯ ಟ್ರಸ್ಟಿಗಳಾಗಿದ್ದಾರೆ. 

ಉದ್ಧವ್ ನೇತೃತ್ವದ ಮಹಾರಾಷ್ಟ್ರ ಸರ್ಕಾರದಲ್ಲಿ ಅವರ ಹಿರಿಯ ಮಗ ಪರಿಸರ, ಪ್ರವಾಸೋದ್ಯಮದಂತಹ ಮಹತ್ವದ ಖಾತೆಗಳನ್ನು ನಿಭಾಯಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು