ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಕೊರೊನಾ ಸೋಂಕಿತರಲ್ಲಿ ಹೆಚ್ಚಿನವರು 31–40 ವರ್ಷ ವಯಸ್ಸಿನವರು

Last Updated 27 ಮಾರ್ಚ್ 2020, 4:30 IST
ಅಕ್ಷರ ಗಾತ್ರ

ಮುಂಬೈ: ಕೊರೊನಾ ವೈರಸ್ (ಕೋವಿಡ್–19) ಹಿರಿಯ ನಾಗರಿಕರು ಮತ್ತು ವೃದ್ಧರ ಮೇಲೆಯೇ ಹೆಚ್ಚು ಪರಿಣಾಮ ಬೀರುತ್ತದೆ, ಕಡಿಮೆ ವಯಸ್ಸಿನವರು ಭಯಪಡಬೇಕಿಲ್ಲ ಎಂಬ ವದಂತಿಗಳು ಹರಡುತ್ತಿರುವ ನಡುವೆಯೇ ಮಹಾರಾಷ್ಟ್ರದಲ್ಲಿ ಆಘಾತಕಾರಿ ವಿಚಾರ ಬಯಲಾಗಿದೆ.

ರಾಜ್ಯದಲ್ಲಿ ಸೋಂಕು ಪಿಡಿತರಲ್ಲಿ ಹೆಚ್ಚಿನವರು 31ರಿಂದ 40 ವರ್ಷ ವಯಸ್ಸಿನವರು ಎಂದು ಮಹಾರಾಷ್ಟ್ರ ವೈದ್ಯಕೀಯ ಶಿಕ್ಷಣ ಮತ್ತು ಔಷಧ ಇಲಾಖೆ ಸಿದ್ಧಪಡಿಸಿರುವ ವರದಿಯಲ್ಲಿ ಹೇಳಲಾಗಿದೆ. ಆದರೆ ಮೃತಪಟ್ಟವರು 61–70ರ ವಯೋಮಾನದವರು ಎಂದು ಉಲ್ಲೇಖಿಸಲಾಗಿದೆ.

ಬುಧವಾರದವರೆಗೆ ಕೋವಿಡ್–19 ದೃಢಪಟ್ಟವರಲ್ಲಿ 33 ಮಂದಿ 31–40ರ ವಯೋಮಾನದವರಾಗಿದ್ದಾರೆ.

ವರದಿಯಲ್ಲಿ ವಯಸ್ಸಿನ ಆಧಾರದಲ್ಲಿ ಸೋಂಕು ಪೀಡಿತರ ಸಂಖ್ಯೆಯನ್ನು ವಿಭಾಗಿಸಲಾಗಿದೆ. 1–10ರ ವಯೋಮಾನದ ಇಬ್ಬರು, 11–20ರ ವಯೋಮಾನದ 8 ಮಂದಿ, 21–30ರ ವಯೋಮಾನದ 24, 31-40ರ 33, 41–50ರ ವಯಸ್ಸಿನ 24, 51–60ರ ವಯಸ್ಸಿನ 15, 61–70ರ ವಯಸ್ಸಿನ 13 ಮತ್ತು 71–80ರ ವಯೋಮಾನದ 3 ಮಂದಿ ಸೋಂಕಿತರು ಇದ್ದಾರೆ ಎಂದು ವರದಿ ತಿಳಿಸಿದೆ.

ಹೆಚ್ಚಿನ ಪ್ರಕರಣಗಳು ವಿದೇಶಗಳಿಂದ ಬಂದವರಲ್ಲೇ, ಕ್ರಮವಾಗಿ ಯುಎಇ, ಅಮೆರಿಕ, ಸೌದಿ ಅರೇಬಿಯಾ, ಬ್ರಿಟನ್‌ ಮತ್ತು ಫಿಲಿಪ್ಪೀನ್ಸ್‌ನಿಂದ ಬಂದವರಲ್ಲಿ ದೃಢಪಟ್ಟಿದೆ. ಉಳಿದ ಪ್ರಕರಣಗಳು ಥಾಯ್ಲೆಂಡ್, ಆಸ್ಟ್ರೇಲಿಯಾ, ಸ್ಕಾಟ್ಲೆಂಡ್, ಟರ್ಕಿ, ರಷ್ಯಾದ, ಕಾಂಗೊ, ಒಮನ್ ಮತ್ತು ಸ್ಪೇನ್‌ನಿಂದ ಬಂದವರಲ್ಲಿ ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT