ಶಬರಿಮಲೆ ಪ್ರತಿಭಟನೆ: ಹಿಂಸಾಚಾರದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

7
ಮೃತ ವ್ಯಕ್ತಿ ಶಬರಿಮಲೆ ಕರ್ಮಸಮಿತಿ ಕಾರ್ಯಕರ್ತ

ಶಬರಿಮಲೆ ಪ್ರತಿಭಟನೆ: ಹಿಂಸಾಚಾರದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

Published:
Updated:

ಕೊಚ್ಚಿ: ಕೇರಳದ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರಿಬ್ಬರು ಪ್ರವೇಶ ಮಾಡಿ ದರ್ಶನ ಪಡೆದ ನಂತರ ಕೇರಳದಲ್ಲಿ ಭುಗಿಲೆದ್ದ ಹಿಂಸಾರದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಶಬರಿಮಲೆ ಕರ್ಮಸಮಿತಿ ಕಾರ್ಯಕರ್ತ ಚಂದ್ರನ್ ಉಣ್ಣಿತಾನ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಅರ್ಧರಾತ್ರಿ ಶಬರಿಗಿರಿ ಏರಿದ ನಾರಿ

ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಶಬರಿಮಲೆ ಕರ್ಮಸಮಿತಿ ಬುಧವಾರ ಸಂಜೆ ಪಂದಳಂನಲ್ಲಿ ಪ್ರತಿಭಟನಾ ರ್‍ಯಾಲಿ ಆಯೋಜಿಸಿತ್ತು. ಆ ಸಂದರ್ಭ ಸ್ಥಳೀಯ ಸಿಪಿಎಂ ಕಚೇರಿ ಬಳಿಯಿಂದ ಪ್ರತಿಭಟನಾಕಾರರ ಮೇಲೆ ಕಲ್ಲುತೂರಾಟ ನಡೆದೆ ಎನ್ನಲಾಗಿದ್ದು, ಉಣ್ಣಿತಾನ್ ಗಾಯಗೊಂಡಿದ್ದರು ಎಂದು ಮನೋರಮಾ ಆನ್‌ಲೈನ್ ಸುದ್ದಿತಾಣ ವರದಿ ಮಾಡಿದೆ.

ಇದನ್ನೂ ಓದಿ: ಕೇರಳದಾದ್ಯಂತ ಪ್ರತಿಭಟನೆಯ ಬಿಸಿ, ಸಿಪಿಎಂ-ಬಿಜೆಪಿ ನಡುವೆ ಸಂಘರ್ಷ

ಮಹಿಳೆಯರ ದೇಗುಲ ಪ್ರವೇಶವನ್ನು ವಿರೋಧಿಸಿ ಶಬರಿಮಲೆ ಕರ್ಮಸಮಿತಿ ಮತ್ತು ಅಂತರರಾಷ್ಟ್ರೀಯ ಹಿಂದೂ ಪರಿಷತ್‌ (ಎಎಚ್‌ಪಿ) ಕರೆಕೊಟ್ಟಿರುವ ಕೇರಳ ಬಂದ್‌ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರತಿಭಟನಾಕಾರರು ಹಿಂಸಾಚಾರ, ರಸ್ತೆ ತಡೆಗೆ ಮುಂದಾದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹರಾ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಹರತಾಳದಂದು ಹಿಂಸಾಚಾರ ಮಾಡಿದರೆ ತಕ್ಷಣವೇ ಬಂಧಿಸಿ: ಡಿಜಿಪಿ ಆದೇಶ 


ಬಂದ್ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ತಿರುವನಂತಪುರದಲ್ಲಿ ಜನ ಸಂಚಾರ ವಿರಳವಾಗಿದೆ. –ಎಎನ್‌ಐ ಚಿತ್ರ

ಇನ್ನಷ್ಟು...

ಇದು ಸಮಾನತೆ ಕಡೆಗೆ ಮೊದಲ ಹೆಜ್ಜೆ ಎನ್ನುತ್ತಾರೆ ಅಯ್ಯಪ್ಪ ದರ್ಶನ ಮಾಡಿದ ಬಿಂದು​

‘ಶಬರಿಮಲೆ ದೇಗುಲಕ್ಕೆ ಮಹಿಳೆಯರು ಹೋಗಬಹುದು’ ಸುಪ್ರೀಂಕೋರ್ಟ್

ಕೇರಳದಲ್ಲಿ 620 ಕಿ.ಮೀ ‘ಮಹಿಳಾ ಗೋಡೆ’

*  ಶಬರಿಮಲೆ ಪ್ರವೇಶಕ್ಕೆ ತಡೆ: ಅಯ್ಯಪ್ಪ ದರ್ಶನ ಪಡೆಯದೆ ಹಿಂತಿರುಗಿದ 'ಮನಿತಿ' ತಂಡ

ತ್ರಿವಳಿ ತಲಾಖ್ ನಿಷೇಧ ಲಿಂಗ ಸಮಾನತೆ, ಶಬರಿಮಲೆ ಸಂಪ್ರದಾಯದ ವಿಚಾರ: ಮೋದಿ

ವನಿತಾ ಮದಿಲ್: ಕಾಸರಗೋಡಿನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಲ್ಲು ತೂರಾಟ

ಶಬರಿಮಲೆಗೆ ತೆರಳಲು ಮುಂದಾದ ಹಿಂದೂ ಐಕ್ಯ ವೇದಿಕೆ ನಾಯಕಿ ಬಂಧನ: ಪ್ರತಿಭಟನೆ

ಶಬರಿಮಲೆ: ಎಚ್ಚರವಿರಲು ಕರ್ನಾಟಕಕ್ಕೂ ಸೂಚನೆ

ಶಬರಿಮಲೆ ಪ್ರತಿಭಟನೆ ವೇಳೆ ಲಾಠಿಚಾರ್ಜ್‌ನಿಂದ ಭಕ್ತ ಮೃತಪಟ್ಟ ಸುದ್ದಿ ನಿಜವೇ?

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !