ಬುಧವಾರ, ಡಿಸೆಂಬರ್ 11, 2019
27 °C
ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳಿಗೆ ತಾಕೀತು

ಅಶ್ಲೀಲ ಚಿತ್ರಗಳಿಗೆ ‘ಸುಪ್ರೀಂ’ ಅಂಕುಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲೈಂಗಿಕ ಅಪರಾಧ ದೃಶ್ಯ ಒಳಗೊಂಡ ಅಶ್ಲೀಲ ಚಿತ್ರ, ವಿಡಿಯೊ ಪ್ರಸರಣಕ್ಕೆ ಅಂಕುಶ ಹಾಕಲು ಗುಣಮಟ್ಟದ ಕಾರ್ಯಾಚರಣೆ ವ್ಯವಸ್ಥೆ (ಎಸ್‌ಒಪಿ) ರೂಪಿಸುವಂತೆ ಸಾಮಾಜಿಕ ಜಾಲತಾಣಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ಸೋಮವಾರದ (ಡಿ.10 ) ಒಳಗಾಗಿ ನ್ಯಾಯಾಲಯಕ್ಕೆ ಎಸ್‌ಒಪಿ ಕರಡನ್ನು ಸಲ್ಲಿಸುವಂತೆ ನ್ಯಾಯಪೀಠವು ಗೂಗಲ್‌, ಮೈಕ್ರೋಸಾಫ್ಟ್‌, ಯು–ಟ್ಯೂಬ್‌, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ನಂತಹ ಸಾಮಾಜಿಕ ಜಾಲತಾಣಗಳಿಗೆ ಸೂಚಿಸಿದೆ.

‘ಮಕ್ಕಳ ಅಶ್ಲೀಲ ಚಿತ್ರ, ಅತ್ಯಾಚಾರ ಮತ್ತು ಸಾಮೂಹಿಕ ಬಲಾತ್ಕಾರದ ವಿಡಿಯೊ ಮತ್ತು ಆಕ್ಷೇಪಾರ್ಹ ಚಿತ್ರಗಳನ್ನು ನಾಶಪಡಿಸಲು ಎಲ್ಲರ ಒಪ್ಪಿಗೆಯೂ ಇದೆ’ ಎಂದು ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕೂರ್ ಮತ್ತು ಯು.ಯು. ಲಲಿತ್ ಅವರಿದ್ದ ಪೀಠ ಹೇಳಿದೆ.

ಕಂಪನಿಗಳಿಗೆ ಕೇಂದ್ರದ ಸಲಹೆ

ಅಶ್ಲೀಲ ಚಿತ್ರ ಮತ್ತು ವಿಡಿಯೊಗಳಿಗೆ ಕಡಿವಾಣ ಹಾಕಲು ಗುಣಮಟ್ಟದ ಕಾರ್ಯಾಚರಣೆ ವ್ಯವಸ್ಥೆ ರೂಪಿಸಲು ಖಾಸಗಿ ಕಂಪನಿಗಳಿಗೆ ಕೇಂದ್ರ ಸರ್ಕಾರ ಕೆಲವು ಸಲಹೆ ನೀಡಿದೆ.

* ಅಶ್ಲೀಲ ಸಂದೇಶ, ಚಿತ್ರ ಮತ್ತು ದೃಶ್ಯಾವಳಿ ಗುರುತಿಸಿ, ತೆಗೆದು ಹಾಕಲು ವಿಶ್ವಾಸಾರ್ಹ ವ್ಯಕ್ತಿಗಳನ್ನು ನಿಯೋಜಿಸಬೇಕು.

* ಕಾನೂನು ಜಾರಿ ಏಜೆನ್ಸಿಗಳ ಕೋರಿಕೆ ನಿರ್ವಹಿಸಲು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ವಿಧಾನ ಜಾರಿಗೆ ತರಬೇಕು.

* ಭಾರತ ಮೂಲದ ಅಧಿಕಾರಿಗಳನ್ನು ಈ ಕೆಲಸಕ್ಕೆ ನಿಯೋಜಿಸಬೇಕು

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು