ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ರಜೆ ರದ್ದುಗೊಳಿಸಿ ಜೂನ್ 19ರವರೆಗೆ ಕೆಲಸ ಮಾಡಲು ಸುಪ್ರೀಂ ಕೋರ್ಟ್ ನಿರ್ಧಾರ

Last Updated 16 ಮೇ 2020, 11:29 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್ ಲಾಕ್‌ಡೌನ್ ಕಾರಣದಿಂದಾಗಿ ನ್ಯಾಯಾಲಯದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವುದರಿಂದಾಗಿ, ಸುಪ್ರೀಂ ಕೋರ್ಟ್ ತನ್ನ ಬೇಸಿಗೆ ರಜೆಯನ್ನು ನ್ಯಾಯಾಲಯದ ಕಾರ್ಯನಿರ್ವಹಣೆಯ ಅವಧಿಯೆಂದು ಘೋಷಿಸಲು ನಿರ್ಧರಿಸಿದೆ.

ಕೊರೊನಾ ಮತ್ತು ಲಾಕ್‌ಡೌನ್ ಕಾರಣದಿಂದಾಗಿ ನ್ಯಾಯಾಧೀಶರ ಬೇಸಿಗೆ ರಜೆ ರದ್ದು ಪಡಿಸಿತ್ತು. ಹೀಗಾಗಿ ಮೇ 18 ಅಂದರೆ ಸೋಮವಾರದಿಂದ 5 ವಾರಗಳ ಅವಧಿಗೆ ಜೂನ್ 19ರವರೆಗೆ ಬೇಸಿಗೆ ರಜೆ ತೆಗೆದುಕೊಳ್ಳಲು ಹೇಳಲಾಗಿತ್ತು. ಆದರೀಗ ಅದನ್ನೂ ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್‌, ಜೂನ್‌ 19ರ ವರೆಗೆ ಪ್ರಕರಣಗಳನ್ನ ಆಲಿಸಿ ತೀರ್ಪು ನೀಡಲಿದೆ. ಬೇಸಿಗೆ ರಜೆಯನ್ನು ಮರು ನಿಗದಿಪಡಿಸಲಾಗಿದ್ದು, ಕಾರ್ಯನಿರ್ವಹಣೆಯ ಅವಧಿ ಎಂದು ಘೋಷಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಅಧಿಸೂಚನೆಯಲ್ಲಿ ತಿಳಿಸಿದೆ.

ಅಕ್ಟೋಬರ್ 14, 2019ರ ಮೇಲಿನ ಅಧಿಸೂಚನೆಯಲ್ಲಿನ ಉಳಿದವುಗಳಲ್ಲಿ ಯಾವುದು ಬದಲಾಗುವುದಿಲ್ಲ ಎಂದು ಅದು ಹೇಳಿದೆ.
ನ್ಯಾಯಾಲಯದ ಸಂಪೂರ್ಣ ಬಲದಿಂದ ಮತ್ತು ಕನಿಷ್ಠ ಜೂನ್ 19 ರವರೆಗೆ ಸಾಧ್ಯವಾದಷ್ಟು ಕೆಲಸ ಮಾಡಲು ಬೇಸಿಗೆ ರಜೆಯ ಸಮಯದಲ್ಲಿ ತನ್ನ ಕೆಲಸವನ್ನು ಮುಂದುವರಿಸಲು ಸರ್ವೋಚ್ಛ ನ್ಯಾಯಾಲಯವು ಶುಕ್ರವಾರ ನಿರ್ಧರಿಸಿತು.
ಮೂರು ನ್ಯಾಯಾಧೀಶರನ್ನು ಒಳಗೊಂಡ ಐದು ಪೀಠಗಳು ಮೇ 18ರಿಂದ ಜೂನ್ 19ರವರೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ತುರ್ತು ವಿಷಯಗಳು ಸೇರಿದಂತೆ ಬಾಕಿ ಉಳಿದಿರುವ ಮತ್ತು ಹೊಸ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಿವೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಅಭಿಪ್ರಾಯಗಳ ಪ್ರಸರಣದ ಮೂಲಕ ಪೂರ್ಣ ನ್ಯಾಯಾಲಯದ ಸಭೆ ನಡೆಯಿತು. ನ್ಯಾಯಾಧೀಶರ ಸಮ್ಮತಿಯೊಂದಿಗೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಕನಿಷ್ಠ ಜೂನ್ 19 ರವರೆಗೆ ಬೇಸಿಗೆ ರಜೆ ಪಡೆಯದಿರಲು ನಿರ್ಧರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT