ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಕಿ.ಮೀ. ಉದ್ದದ ‘ಅನಕೊಂಡ’ ಸಂಚಾರ ಯಶಸ್ವಿ

ಸರಕು ಸಾಗಾಣಿಕೆ ರೈಲು: ಭಾರತೀಯ ರೈಲ್ವೆ ಇಲಾಖೆಯಿಂದ ಹೊಸ ಇತಿಹಾಸ
Last Updated 29 ಮೇ 2019, 17:12 IST
ಅಕ್ಷರ ಗಾತ್ರ

ನವದೆಹಲಿ: ಎರಡು ಕಿಲೋ ಮೀಟರ್‌ ಉದ್ದದ ಸರಕು ಸಾಗಾಣಿಕೆಯ ರೈಲು ಸಂಚಾರವನ್ನು ಯಶಸ್ವಿಯಾಗಿ ಕೈಗೊಳ್ಳುವ ಮೂಲಕ ಭಾರತೀಯ ರೈಲ್ವೆ ಹೊಸ ಇತಿಹಾಸ ಸೃಷ್ಟಿಸಿದೆ.

‘ರೈಲು ಗಾಲಿಗಳ ಮೇಲೆ ಅನಕೊಂಡ’ ಎಂದೇ ಇದನ್ನು ಕರೆಯಲಾಗಿತ್ತು. ಸಾಮಾನ್ಯವಾಗಿ ಸರಕು ಸಾಗಾಣಿಕೆ ರೈಲು 700 ಮೀಟರ್‌ ಉದ್ದವಿರುತ್ತದೆ.

ಬಿಲಾಸ್ಪುರದಲ್ಲಿ ಮುಖ್ಯ ಕಚೇರಿ ಹೊಂದಿರುವ ಆಗ್ನೇಯ ಕೇಂದ್ರ ರೈಲ್ವೆ (ಎಸ್‌ಇಸಿಆರ್‌) ಈ ಸಾಹಸ ಕೈಗೊಂಡಿದೆ. ಭಿಲಾಯಿ ಮತ್ತು ಕೊರ‍್ಬಾ ರೈಲು ನಿಲ್ದಾಣಗಳ ಮಧ್ಯ ಈ ರೈಲು ಸಂಚರಿಸಿದ್ದು, 177 ಬೋಗಿಗಳು ಹೊಂದಿದೆ.

ವಿತರಣಾ ವಿದ್ಯುತ್‌ ನಿಯಂತ್ರಣಾ ವ್ಯವಸ್ಥೆಯ (ಡಿಪಿಸಿಎಸ್‌) ತಂತ್ರಜ್ಞಾನದ ಮೂಲಕ ಸರಕು ಸಾಗಾಣಿಕೆಯ ಮೂರು ರೈಲುಗಳನ್ನು ಒಗ್ಗೂಡಿಸಲಾಗಿತ್ತು. ಮುಂಭಾಗ ಡೀಸೆಲ್‌ ಎಂಜಿನ್‌ ಇಡೀ ರೈಲಿನ ನಿಯಂತ್ರಣ ಹೊಂದುವಂತೆ ವ್ಯವಸ್ಥೆ ಮಾಡಲಾಗಿತ್ತು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಂತ್ರಜ್ಞಾನದ ಲಾಭ ಹೊಸ ಅವಕಾಶಗಳನ್ನು ಕಲ್ಪಿಸಿದೆ. ಇದರಿಂದ, ಸರಕು ಸಾಗಾಣಿಕೆಯನ್ನು ಕಡಿಮೆ ವೆಚ್ಚದಲ್ಲಿ ಕೈಗೊಳ್ಳಬಹುದಾಗಿದೆ. ಡಿಪಿಸಿಎಸ್‌ ತಂತ್ರಜ್ಞಾನ ಬಳಕೆಯಿಂದ ಹಲವು ಲಾಭಗಳಿವೆ. ಸಿಬ್ಬಂದಿ ಮತ್ತು ಮಾರ್ಗಗಳ ಸಂಖ್ಯೆಯಲ್ಲೂ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ.

ಮಾನವ ಸಂಪನ್ಮೂಲ ಬಳಕೆಯನ್ನು ಕಡಿಮೆ ಮಾಡುವುದು, ಲಾರಿಗಳ ಮೇಲಿನ ಸರಕು ಸಾಗಾಣಿಕೆ ಒತ್ತಡ ಕಡಿಮೆ ಮಾಡುವುದು ಮತ್ತು ಕಡಿಮೆ ವೆಚ್ಚದಲ್ಲಿ ಸಾಗಿಸುವ ಉದ್ದೇಶವನ್ನು ರೈಲ್ವೆ ಇಲಾಖೆ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಭುವನೇಶ್ವರ ಮುಖ್ಯ ಕಚೇರಿ ಹೊಂದಿರುವ ಈಸ್ಟ್‌ ಕೋಸ್ಟ್‌ ರೈಲ್ವೆ ವಲಯ ಒಡಿಶಾದಲ್ಲಿ ಎರಡು ಕಿಲೋ ಮೀಟರ್‌ ಉದ್ದದ ಸರಕು ಸಾಗಾಣಿಕೆ ರೈಲು ಸಂಚಾರ ಪ್ರಾಯೋಗಿಕ ಪರೀಕ್ಷೆ ಕೈಗೊಂಡಿತ್ತು.

147 ಬೋಗಿಗಳನ್ನು ಹೊಂದಿದ್ದ ಈ ರೈಲು ಗಾರ್ಡ್‌ ವ್ಯಾನ್‌ಗಳು ಮತ್ತು ನಾಲ್ಕು ಎಂಜಿನ್‌ಗಳನ್ನು ಹೊಂದ್ದಿದ್ದವು. 145 ಕಿಲೋ ಮೀಟರ್‌ ಉದ್ದದ ಗೊಡ್‌ಭಾಗಾ ಮತ್ತು ಬಲಂಗಿರ್ ನಿಲ್ದಾಣಗಳ ನಡುವೆ ಈ ರೈಲು ಸಂಚರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT