ಸೋಮವಾರ, ಫೆಬ್ರವರಿ 24, 2020
19 °C

ಗೋಲ್ಡನ್‌ ಟೆಂಪಲ್‌ನಲ್ಲಿ ಟಿಕ್‌ಟಾಕ್‌ ನಿಷೇಧ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ಚಂಡೀಗಡ: ಅಮೃತಸರದಲ್ಲಿರುವ ಸ್ವರ್ಣ ದೇಗುಲದ (ಗೋಲ್ಡನ್‌ ಟೆಂಪಲ್‌) ಆವರಣದೊಳಗೆ ಟಿಕ್‌ಟಾಕ್‌ ವಿಡಿಯೊ ಚಿತ್ರೀಕರಿಸುವುದನ್ನು ಶಿರೋಮಣಿ ಗುರುದ್ವಾರ ಪ್ರಬಂಧಕ್‌ ಸಮಿತಿ (ಎಸ್‌ಜಿಪಿಸಿ) ನಿಷೇಧಿಸಿದೆ. 

ಆಧ್ಯಾತ್ಮಿಕ ವಾತಾವರಣಕ್ಕೆ ಭಂಗ ಉಂಟಾಗುವುದನ್ನು ತಡೆಯುವ ಉದ್ದೇಶದಿಂದ ಎಸ್‌ಜಿಪಿಸಿ ಈ ಕ್ರಮ ತೆಗೆದುಕೊಂಡಿದೆ. ದೇಗುಲದ ಆವರಣದಲ್ಲಿ ವಿಡಿಯೊ ಚಿತ್ರೀಕರಿಸದ್ದಂತೆ ಪೋಸ್ಟರ್‌ ಅಂಟಿಸಿ ಎಚ್ಚರಿಕೆಯನ್ನು ನೀಡಲಾಗಿದೆ.  

‘ನಿಷೇಧದ ನಡುವೆಯೂ, ಪ್ರವಾಸಿಗರು ಟಿಕ್‌ಟಾಕ್‌ ವಿಡಿಯೊ ಚಿತ್ರೀಕರಿಸುವುದನ್ನು ಮುಂದುವರಿಸಿದರೆ ದೇವಸ್ಥಾನದ ಆವರಣದೊಳಗೆ ಮೊಬೈಲ್‌ ಫೋನ್‌ ಬಳಸುವುದನ್ನು ನಿಷೇಧಿಸುವ ಕುರಿತು ಯೋಚಿಸಬೇಕಾಗುತ್ತದೆ’ ಎಂದು ಅಕಾಲ್ ತಖ್ತ್‌ನ ಪ್ರಧಾನ ಅರ್ಚಕ ಗಿಯಾನಿ ಹರ್ಪ್ರೀತ್‌ ಸಿಂಗ್‌ ಹೇಳಿದ್ದಾರೆ. 

ಕೆಲ ದಿನಗಳ ಹಿಂದೆ ಮೂವರು ಹುಡುಗಿಯರು ದೇವಸ್ಥಾನದೊಳಗೆ ಟಿಕ್‌ಟಾಕ್‌ ವಿಡಿಯೊ ಚಿತ್ರೀಕರಿಸಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಕಳೆದ ಜನವರಿಯಲ್ಲಿ ನಡೆದ ಎರಡನೇ ಪ್ರಕರಣವಿದು. ಸಿಖ್ಖರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಆರೋಪದಡಿ ಯುವತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಬಳಿಕ, ಯುವತಿ ಕ್ಷಮೆ ಯಾಚಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು