ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮಹಾ' ಮೈತ್ರಿ ಸರ್ಕಾರದ ಸಿಎಂಪಿ: ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿದ ಪಕ್ಷಗಳು

Last Updated 28 ನವೆಂಬರ್ 2019, 13:07 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುತ್ತಿರುವ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಗುರುವಾರ 'ಮಹಾ ವಿಕಾಸ ಆಘಾಡಿ‍'ಯಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ (ಸಿಎಂಪಿ) ಪಟ್ಟಿಯನ್ನು ಬಿಡುಗಡೆ ಮಾಡಿವೆ.

ಈ ಮೂರು ಪಕ್ಷಗಳು ಒಂದು ವಾರ ಮಾತುಕತೆ ನಡೆಸಿ ಈ ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಿಎಂಪಿ) ರೂಪಿಸಿದ್ದು, ಜಾತ್ಯಾತೀತವಾದ ಎಲ್ಲವನ್ನೂ ಒಳಗೊಂಡ ಕಾರ್ಯಕ್ರಮಗಳನ್ನು ಇದು ಒಳಗೊಂಡಿದೆ. ಯಾವ ಯಾವ ಕ್ಷೇತ್ರಕ್ಕೆ ಏನೇನು ಯೋಜನೆಗಳು ಎಂಬ ವಿವರ ಈ ಕೆಳಗಿದೆ.

ಕೃಷಿ

* ಪ್ರವಾಹದಿಂದ ಸಂತ್ರಸ್ತರಾಗಿರುವ ರೈತರಿಗೆ ತಕ್ಷಣ ನೆರವು

* ರೈತರ ಸಾಲ ಮನ್ನ ತಕ್ಷಣ ಜಾರಿ

* ಬೆಳೆ ಕಳೆದುಕೊಂಡ ರೈತರಿಗೆ ತಕ್ಷಣವೇ ಪರಿಹಾರ ಸಿಗುವಂತಾಗಲು ಬೆಳೆ ವಿಮೆ ಯೋಜನೆ ಪರಿಷ್ಕರಣೆ

* ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಲು ಸೂಕ್ತ ಕ್ರಮ ಕೈಗೊಳ್ಳುವುದು

* ಬರಗಾಲ ಪೀಡಿತ ಪ್ರದೇಶಗಳಿಗೆ ಸೂಕ್ತ ನೀರಾವರಿ ಒದಗಿಸಲು ಕ್ರಮ

ನಿರುದ್ಯೋಗ

*ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ತಕ್ಷಣ ಕ್ರಮ

* ಶಿಕ್ಷಣ ಪಡೆದ ನಿರುದ್ಯೋಗಿಗಳಿಗೆ ಶಿಷ್ಯವೇತನ ನೀಡಲಾಗುವುದು

* ಸ್ಥಳೀಯ ಯುವಕರಿಗೆ ಉದ್ಯೋಗದಲ್ಲಿ ಶೇ 80ರಷ್ಟು ಮೀಸಲಾತಿ ಕಲ್ಪಿಸುವ ಕಾನೂನನ್ನು ಜಾರಿಗೆ ತರಲಾಗುವುದು

ಮಹಿಳೆ

* ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ

* ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ

* ಜಿಲ್ಲಾ ಕೇಂದ್ರಗಳು ಹಾಗೂ ನಗರಗಳಲ್ಲಿ ಔದ್ಯೋಗಿಕ ಮಹಿಳೆಯರಿಗೆ ಹಾಸ್ಟೆಲ್‌ ನಿರ್ಮಾಣ

* ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಗೌರವಧನ ಏರಿಕೆ ಮತ್ತು ಇತರೆ ಸೇವಾ ಸೌಲಭ್ಯಗಳನ್ನು ನೀಡಲಾಗುವುದು

* ಮಹಿಳಾ ಸ್ವಸಹಾಯ ಗುಂಪುಗಳ ಬಲವರ್ಧನೆ

ಶಿಕ್ಷಣ

* ಶಿಕ್ಷಣದ ಗುಣಮಟ್ಟ ಉತ್ತಮ ಪಡಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು

* ಕೃಷಿ ಕಾರ್ಮಿಕರ ಮಕ್ಕಳು ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಶೂನ್ಯ ಬಡ್ಡಿದರದಲ್ಲಿ ಶಿಕ್ಷಣ ಸಾಲ ಒದಗಿಸಲಾಗುವುದು

ನಗರಾಭಿವೃದ್ಧಿ

* ಮುಖ್ಯಮಂತ್ರಿ ಗ್ರಾಮ ಸಡಕ್‌ ಯೋಜನೆಯ ರೀತಿಯಲ್ಲಿಯೇ ನಗರ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ರಸ್ತೆ ಅಭಿವೃದ್ಧಿಗಾಗಿಯೇ ನಗರ ಪಂಚಾಯಿತಿ, ಪುರಸಭೆ, ನಗರ ಪಾಲಿಕೆಗಳಲ್ಲಿ ಪ್ರತ್ಯೇಕ ಆಯವ್ಯಯ ಇಡಲಾಗುವುದು.

* ಕೊಳಗೇರಿ ಪುನರ್ವಸತಿ ಕಾರ್ಯಕ್ರಮದ ಅಡಿ ನೀಡಲಾಗುತ್ತಿದ್ದ 300 ಚದರ ಅಡಿ ಬದಲು 500 ಚದರ ಅಡಿ ಪ್ರದೇಶವನ್ನು ನೀಡಲು ನಿರ್ಧರಿಸಲಾಗಿದೆ.

ಆರೋಗ್ಯ

* ತಾಲ್ಲೂಕು ಮಟ್ಟದಲ್ಲಿ ₹1ಗೆ ಚಿಕಿತ್ಸೆ ನೀಡುವಂತಹ ಕ್ಲಿನಿಕ್‌ಗಳ ನಿರ್ಮಾಣ

* ಎಲ್ಲಾ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳ ಸ್ಥಾಪನೆ

* ರಾಜ್ಯದ ಎಲ್ಲಾ ನಾಗರಿಕರಿಗೆ ಆರೋಗ್ಯ ವಿಮೆ ಒದಗಿಸಲಾಗುವುದು

ಕೈಗಾರಿಕೆ

* ಹೊಸ ಕೈಗಾರಿಕೆ ಮತ್ತು ಹೂಡಿಕೆದಾರಿಗೆ ಅನುಕೂಲವಾಗುವಂತೆ ಅನುಮತಿ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸುವುದು ಮತ್ತು ಸಾಧ್ಯವಾಗುಷ್ಟು ರಿಯಾಯಿತಿ ಒದಗಿಸಲಾಗುವುದು

* ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಹೂಡಿಕೆದಾರರನ್ನು ಸೆಳೆಯುವುದಕ್ಕಾಗಿ ನಿಯಮಗಳ ಪರಿಷ್ಕರಣೆ ಮಾಡಲಾಗುವುದು

ಸಾಮಾಜಿಕ ನ್ಯಾಯ

* ಪರಿಶಿಷ್ಟ ಜಾತಿ, ಪಂಗಡ, ಧಾಂಗರ್ ಮತ್ತು ಇತರೆ ಹಿಂದುಳಿದ ವರ್ಗಗಳ ಬಾಕಿ ಉಳಿದ ಪ್ರಕರಣಗಳ ಇತ್ಯರ್ಥ

* ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯದವರ ಉನ್ನತಿಗಾಗಿ ಅನೇಕ ಯೋಜನೆಗಳನ್ನ ಜಾರಿಗೆ ತರಲಾಗುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT