ಗುರುವಾರ , ಡಿಸೆಂಬರ್ 5, 2019
21 °C

ಪತನದ ಮೊದಲ ಹಂತದಲ್ಲಿ ಶಿವಸೇನಾ:  ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ, ಮಹಾರಾಷ್ಟ್ರದಲ್ಲಿ  ಶಿವಸೇನಾ 2014ರ ಮತ್ತು 2019ರ ಚುನಾವಣೆಯಲ್ಲಿ ಅಸ್ತಿತ್ವ ಉಳಿಸಿಕೊಂಡಿದೆ. ಇದೀಗ ಬಿಜೆಪಿ ಸಖ್ಯ ತೊರೆದಿರುವ ಶಿವಸೇನಾ ಪತನದ ಮೊದಲ ಹಂತದಲ್ಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಧ್ಯವಿಲ್ಲದ ಷರತ್ತುಗಳನ್ನು ಶಿವಸೇನಾ ಮುಂದಿಟ್ಟಿದೆ. ಹೆಚ್ಚು ಸೀಟುಗಳನ್ನು ಪಡೆದ ಪಕ್ಷದವರೇ ಮುಖ್ಯಮಂತ್ರಿಯಾಗಬೇಕು ಎಂಬ ಮಾತಿಗೆ ವಿರುದ್ಧವಾಗಿ ಶಿವಸೇನಾ ನಡೆದುಕೊಂಡಿದೆ ಎಂದರು.

ಮುಂಬರುವ ಕರ್ನಾಟಕ ಉಪಚುನಾವಣಿಯಲ್ಲಿ ಬಿಜೆಪಿಯ ಕೆಲ ಮುಖಂಡರು ಕಾಂಗ್ರೆಸ್ ಟಿಕೆಟ್‌ಗಾಗಿ ಆ ಪಕ್ಷದ ನಾಯಕರನ್ನು ಭೇಟಿಯಾಗುತ್ತಿದ್ದಾರೆ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಂದೇನಾಗುತ್ತದೆ ಎಂಬ ಅರಿವಿಲ್ಲದೆ ಯಾರಾದರೂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡುವಂತಹ ದುಡುಕಿನ ಕ್ರಮ ಕೈಗೊಳ್ಳಬಾರದು ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು