ಬುಧವಾರ, ನವೆಂಬರ್ 20, 2019
25 °C

ತಿಹಾರ್‌ ಜೈಲಿನಲ್ಲಿ ಡಿಕೆಶಿ ಭೇಟಿಯಾದ ಸೋನಿಯಾ ಗಾಂಧಿ 

Published:
Updated:

ನವದೆಹಲಿ: ಹಣದ ಅಕ್ರಮ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯದಿಂದ (ಇಡಿ) ಬಂದನಕ್ಕೊಳಗಾಗಿರುವ ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಡಿ.ಕೆ ಶಿವಕುಮಾರ್‌ ಅವರನ್ನು ಎಐಸಿಸಿಯ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಿಹಾರ್‌ ಜೈಲಿನಲ್ಲಿ ಬುಧವಾರ ಭೇಟಿಯಾದರು. 

ಬೆಳಗ್ಗೆ 8.15 ನಿಮಿಷಕ್ಕೆ ಸರಿಯಾಗಿ ತಿಹಾರ್‌ ಜೈಲು ಬಳಿಗೆ ಆಗಮಿಸಿದ ಸೋನಿಯಾಗಾಂಧಿ ಡಿ.ಕೆ ಶಿವಕುಮಾರ್‌ ಅವರನ್ನು ಕಂಡರು ಎಂದು ಹೇಳಲಾಗಿದೆ. ಅವರೊಂದಿಗೆ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ಕೆ. ಸಿ.ವೇಣುಗೋಪಾಲ್ ಅವರೂ ಇದ್ದರೆನ್ನಲಾಗಿದೆ. 

ಕಳೆದ ಹದಿನೈದು ದಿನಗಳ ಹಿಂದೆ ತಿಹಾರ್‌ ಜೈಲಿಗೆ ಭೇಟಿ ನೀಡಿದ್ದ ಸೋನಿಯಾ ಗಾಂಧಿ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರನ್ನಷ್ಟೇ ಭೇಟಿಯಾಗಿದ್ದರು. ಆದರೆ, ಡಿ.ಕೆ ಶಿವಕುಮಾರ್‌ ಅವರನ್ನು ಭೇಟಿಯಾಗಿರಲಿಲ್ಲ.  

ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಮಂಗಳವಾರ ತಿಹಾರ್‌ ಜೈಲಿಗೆ ತೆರಳಿ ಡಿಕೆಶಿ ಅವರನ್ನು ಭೇಟಿಯಾಗಿದ್ದರು. 

ಇಂದು ಜಾಮೀನು ಅರ್ಜಿಯ ತೀರ್ಪು 

ಇಡಿ ಬಂಧನದಲ್ಲಿರುವ ಡಿ.ಕೆ ಶಿವಕುಮಾರ್‌ ಅವರು ಜಾಮೀನು ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ಪೂರ್ಣಗೊಂಡಿದೆ. ಇಂದು ಅದರ ತೀರ್ಪು ಹೊರಬೀಳಲಿದೆ. 

ಪ್ರತಿಕ್ರಿಯಿಸಿ (+)