ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಜಾವೂರು ವಾಯುಪಡೆ ಕೇಂದ್ರಕ್ಕೆ ಸುಖೋಯ್-30 ಎಂಕೆಐ ಸೇರ್ಪಡೆ

Last Updated 21 ಜನವರಿ 2020, 11:27 IST
ಅಕ್ಷರ ಗಾತ್ರ

ತಂಜಾವೂರು, ತಮಿಳುನಾಡು : ಹಿಂದೂಮಹಾಸಾಗರ ತೀರ ಪ್ರದೇಶದಲ್ಲಿ ಕಣ್ಗಾವಲು ಇರಿಸಲು ಭಾರತೀಯ ವಾಯುಪಡೆಯು ತಂಜಾವೂರಿನಲ್ಲಿ ಸುಖೊಯ್‌ 30 ಎಂಕೆಐ ಯುದ್ಧವಿಮಾನಗಳ ಕಾರ್ಯಾಚರಣೆ ಘಟಕ ತೆರೆದಿದೆ. ಇದು, ದಕ್ಷಿಣ ಭಾರತದ ಮೊದಲ ಯುದ್ಧವಿಮಾನ ನೆಲೆ ಎನಿಸಿಕೊಂಡಿದೆ.

ಬ್ರಹ್ಮೋಸ್‌ ಸೂಪರ್‌ ಸಾನಿಕ್‌ ಕ್ಷಿಪಣಿಗಳನ್ನು ಹೊತ್ತೊಯ್ಯಲು ಸಾಧ್ಯವಾಗುವಂತೆ ಈ ಸುಖೊಯ್‌ 30 ಎಂಕೆಐ ಯುದ್ಧವಿಮಾನಗಳನ್ನು ಅಭಿವೃದ್ಧಿಗೊಳಿಸಲಾಗಿದೆ.

ಭಾರತೀಯ ರಕ್ಷಣಾ ಸನ್ನದ್ಧತೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ಕಾರ್ಯಾಚರಣೆ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಈ ಯುದ್ಧ ವಿಮಾನವನ್ನು ಇಲ್ಲಿನ ವಾಯುಪಡೆ ಕೇಂದ್ರಕ್ಕೆ ಸೇರ್ಪಡೆಗೊಳಿಸಲಾಗಿದೆ.

ಹಿಂದೂ ಮಹಾಸಾಗರ ವಲಯದಲ್ಲಿರುವ ದೇಶದ ದ್ವೀಪ ಪ್ರದೇಶಗಳು ಮತ್ತು ಸಾಗರ ಗಡಿ ಪ್ರದೇಶಗಳನ್ನು ರಕ್ಷಿಸುವ ಮತ್ತು ಕಾಯುವ ಕಾರ್ಯವನ್ನು ಈ ಯುದ್ಧವಿಮಾನಗಳ ಮೂಲಕ ಮಾಡಲಾಗುತ್ತದೆ ಎಂದು ರಕ್ಷಣಾ ಇಲಾಖೆ ಪ್ರಕಟಣೆ ತಿಳಿಸಿದೆ.

ಇದು ಎಲ್ಲಾ ವಾತಾವರಣದಲ್ಲಿಯೂ, ಬಹುಪಾತ್ರದ ಯುದ್ಧ ಕಾರ್ಯಾಚರಣೆ ನಡೆಸಲು ಶಕ್ತವಾಗಿದ್ದು, ವೈಮಾನಿಕ ದಾಳಿ, ಕಡಲ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ.

ಈ ಯುದ್ಧವಿಮಾನವನ್ನು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಸಮ್ಮುಖದಲ್ಲಿ ಸೇರ್ಪಡೆಗೊಳಿಸಲಾಯಿತು.ವಾಯುಪಡೆಯ ಮುಖ್ಯಸ್ಥ ರಾಕೇಶ್‌ ಕುಮಾರ್ ಸಿಂಗ್‌ ಬದೌರಿಯಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT