‘ಕೈ’ಗೆ ಬಿಸಿ ಮುಟ್ಟಿಸಿದ ಎಸ್‌ಪಿ–ಬಿಎಸ್‌ಪಿ

7

‘ಕೈ’ಗೆ ಬಿಸಿ ಮುಟ್ಟಿಸಿದ ಎಸ್‌ಪಿ–ಬಿಎಸ್‌ಪಿ

Published:
Updated:

ಲಖನೌ: ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡದಲ್ಲಿ ಹೊಸ ಮುಖ್ಯಮಂತ್ರಿಗಳ ಪ್ರಮಾಣ ವಚನ ಸಮಾರಂಭವನ್ನು ಬಿಜೆಪಿ ವಿರೋಧಿ ಪಕ್ಷಗಳ ಒಗ್ಗಟ್ಟಿನ ವೇದಿಕೆಯಾಗಿ ಪರಿವರ್ತಿಸಲು ಕಾಂಗ್ರೆಸ್‌ ಪಕ್ಷ ಬಯಸಿತ್ತು.

ಆದರೆ, ಬಿಎಸ್‌ಪಿ ನಾಯಕಿ ಮಾಯಾವತಿ, ಎಸ್‌ಪಿ ಮುಖಂಡ ಅಖಿಲೇಶ್‌ ಯಾದವ್‌, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಗೈರು ಎದ್ದು ಕಂಡಿತು. 2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯೇತರ ಪಕ್ಷಗಳ ಮಹಾ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ಗೆ ಜಾಗ ಕೊಡಲು ತಮಗೆ ಇಷ್ಟವಿಲ್ಲ ಎಂಬ ಸಂದೇಶವನ್ನು ಮಾಯಾವತಿ ಮತ್ತು ಅಖಿಲೇಶ್‌ ಅವರು ಗೈರುಹಾಜರಿ ಮೂಲಕ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

ಈ ಮೂರು ರಾಜ್ಯಗಳಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಜತೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಳ್ಳದಿದ್ದುದು ಕೂಡ ಈ ಪಕ್ಷಗಳ ಅತೃಪ್ತಿಗೆ ಕಾರಣವಾಗಿದೆ. ಮಹಾಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್‌ ಅವರನ್ನೇ ಬಿಂಬಿಸಬೇಕು ಎಂದು ಎಂ.ಕೆ.ಸ್ಟಾಲಿನ್‌ ಭಾನುವಾರ ಹೇಳಿದ್ದರು.

ಈ ವಿಚಾರದ ಬಗ್ಗೆಯೂ ಮಾಯಾವತಿ ಮತ್ತು ಮಮತಾ ಅವರಿಗೆ ಅತೃಪ್ತಿ ಇದೆ. 

Tags: 

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !