ಮಂಗಳವಾರ, ಜನವರಿ 21, 2020
27 °C

ಪೌರತ್ವ ಮಸೂದೆ ತಿರಸ್ಕರಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇಲ್ಲ: ಕೇಂದ್ರ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

CAB protest

ನವದೆಹಲಿಪೌರತ್ವ ತಿದ್ದುಪಡಿ ಮಸೂದೆಯನ್ನು ಕೆಲವು ರಾಜ್ಯಗಳು ವಿರೋಧಿಸುತ್ತಿದ್ದು, ಮಸೂದೆಯನ್ನು ತಿರಸ್ಕರಿಸಲು ರಾಜ್ಯ ಸರ್ಕಾರಗಳಿಗೆ  ಯಾವುದೇ ಅಧಿಕಾರ ಇಲ್ಲ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

 ಸಂವಿಧಾನದ  7ನೇ ಪರಿಚ್ಛೇದದ ಪ್ರಕಾರ ಕೇಂದ್ರ ಸರ್ಕಾರದ ನಿಯಮವನ್ನು ರಾಜ್ಯ  ಸರ್ಕಾರಗಳು ಅಲ್ಲಗೆಳೆಯುವಂತಿಲ್ಲ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಪೌರತ್ವ ಮಸೂದೆ ವಿರೋಧಿಸಿ ಬೀದಿಗಿಳಿದ ಜಾಮಿಯಾ ವಿವಿ ವಿದ್ಯಾರ್ಥಿಗಳಿಗೆ ಪೊಲೀಸ್ ತಡೆ

ಪಶ್ಚಿಮ ಬಂಗಾಳ, ಕೇರಳ, ಮಧ್ಯ ಪ್ರದೇಶ, ಛತ್ತೀಸಗಡ ಮತ್ತು ಪಂಜಾಬ್ ಮೊದಲಾದ ರಾಜ್ಯಗಳು ತಮ್ಮ ರಾಜ್ಯದಲ್ಲಿ ಪೌರತ್ವ ಮಸೂದೆ ಜಾರಿ ಮಾಡಲು ಬಿಡುವುದಿಲ್ಲ ಎಂದು ಹೇಳಿವೆ. ನೆರೆಯ ಮೂರು ರಾಷ್ಟ್ರಗಳಿಂದ ವಲಸೆ ಬಂದು ದೇಶದಲ್ಲಿ ನೆಲೆಸಿರುವ ಮುಸ್ಲಿಮರಲ್ಲದ ನಾಗರಿಕರಿಗೆ ಮಾತ್ರ  ಪೌರತ್ವ ನೀಡುವುದು ಪಕ್ಷಪಾತ ಮತ್ತು ಅಸಂವಿಧಾನಿಕ ಎಂದು ಈ  ರಾಜ್ಯಗಳು ಹೇಳಿವೆ.

ಪೌರತ್ವ ತಿದ್ದುಪಡಿ ಮಸೂದೆಗೆ  ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ರಾತ್ರಿ ಅಂಕಿತ ಹಾಕಿದ್ದು ಇದು ಕಾಯ್ದೆಯ ರೂಪ ಪಡೆದಿದೆ. ಗೆಜೆಟ್‌ನಲ್ಲಿ ಈ ರೀತಿ ಅಧಿಸೂಚನೆ ಪ್ರಕಟಗೊಂಡಿದೆ.
 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು