ಶನಿವಾರ, ಡಿಸೆಂಬರ್ 7, 2019
22 °C

ಮಧ್ಯಪ್ರದೇಶ: ಮತಯಂತ್ರ ಭದ್ರತಾ ಕೋಣೆಗೆ ಎಸ್‌‍ಯುವಿ ಡಿಕ್ಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೋಪಾಲ್: ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯಲ್ಲಿ ಮತಯಂತ್ರವನ್ನಿರಿಸಿರುವ ಭದ್ರತಾ ಕೊಠಡಿಯ ಗೋಡೆಗೆ ಎಸ್‍ಯುವಿ ಕಾರೊಂದು ಡಿಕ್ಕಿ ಹೊಡೆಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಕಾರು ಡಿಕ್ಕಿಯಾಗಿರುವ ಗೋಡೆ ಭಾಗಶಃ ಹಾನಿಯಾಗಿದೆ.

ನವೆಂಬರ್ 30ರಂದು ಕೂಡಾ ಇದೇ ರೀತಿ ಮತಯಂತ್ರವನ್ನಿಟ್ಟಿದ್ದ ಕೊಠಡಿಯ ಗೋಡೆ ಹಾನಿಯಾಗಿತ್ತು.

ಮತಯಂತ್ರವನ್ನು ದುರ್ಬಳಕೆ ಮಾಡುವ ಹುನ್ನಾರ ಇದು ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಇಲ್ಲಿ ಪ್ರತಿಭಟನೆ ನಡೆಸಿದ್ದಾರೆ

 ಗೋಡೆಗೆ ಡಿಕ್ಕಿ ಹೊಡೆದಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ವಾಹನದಲ್ಲಿದ್ದ ಆರು ಮಂದಿ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಮತಯಂತ್ರವನ್ನಿರಿಸಿದ ಕೊಠಡಿಗೆ ಪ್ರವೇಶಿಸುವುದಕ್ಕಾಗಿ 6 ಮಂದಿ ಯುವಕರು ಎಸ್‍ಯುವಿ ಕಾರನ್ನು ಗೋಡೆಗೆ ಡಿಕ್ಕಿ ಹೊಡೆಸಿದ್ದರು ಎಂದು ಮೂಲಗಳು ಹೇಳಿವೆ.

ವಾಹನ ನೋಂದಣಿ ಸಂಖ್ಯೆ MP19 CB0505  ಹೊಂದಿರುವ  ಕಪ್ಪು ಬಣ್ಣದ ಸ್ಕಾರ್ಪಿಯೊ ಕಾರನ್ನು ರಾತ್ರಿಯೇ ವಶ ಪಡಿಸಿದ್ದು, ಬಂಧನಕ್ಕೊಳಗಾಗಿರುವ ಆರೋಪಿಗಳನ್ನು ಪ್ರಮೋದ್ ಯಾದವ್ ಮತ್ತು ರುದ್ರ ಕುಶ್ವಾಹ ಎಂದು ಗುರುತಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ  ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಕಾರಿನಲ್ಲಿದ್ದ ಶೈಲೇಶ್ ಕುಶ್ವಾಹ, ಸನು ಕುಶ್ವಾಹ, ಪ್ರಿನ್ಸ್ ಅಲಿಯಾಸ್ ಸತ್ಯವೃತ್ ಸಿಂಗ್ ಮತ್ತು ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು  ಅವರ ಪತ್ತೆಗಾಗಿ ಪೊಲೀಸ್ ಬಲೆ ಬೀಸಿದೆ.
 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು