ಬುಧವಾರ, ಸೆಪ್ಟೆಂಬರ್ 22, 2021
28 °C

ನೆಟ್ಟಿಗರಿಂದ ನಟಿ ಸ್ವರಾ ಭಾಸ್ಕರ್‌ಗೆ ಸ್ವರಾ ಆಂಟಿ ಎಂದು ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ಇದೀಗ ಮತ್ತೆ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದಾರೆ. #Swara_aunty ಎಂಬ ಹ್ಯಾಷ್ ಟ್ಯಾಗ್ ಮೂಲಕ ಟ್ವಿಟಿಗರು ಸ್ವರಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ಸೆಲೆಬ್ರಿಟಿ ಚಾಟ್ ಶೋನಲ್ಲಿ ಕಾಣಿಸಿಕೊಂಡಿದ್ದ ಸ್ವರಾ, ನಾಲ್ಕು ವರ್ಷದ ಮಗು ತನ್ನನ್ನು ಆಂಟಿ ಎಂದು ಕರೆದಿದ್ದಕ್ಕೆ ಕೋಪಗೊಂಡು ಆಡಿದ್ದ ಮಾತುಗಳು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮತ್ತು ಈ ವಿಡಿಯೋ ವೈರಲ್ ಆಗುವ ಮೂಲಕ ಸ್ವರಾ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಸಂದರ್ಶನದ ವಿಡಿಯೊದಲ್ಲಿ ಸಿನಿಮಾ ರಂಗಕ್ಕೂ ಬರುವ ಮುನ್ನ ಸ್ವರಾ ಭಾಸ್ಕರ್ ಸೋಪ್ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು. ಈ ಜಾಹಿರಾತಿನಲ್ಲಿ ನಟಿಸಲು ಬಂದಿದ್ದ ನಾಲ್ಕು ವರ್ಷದ ಮಗುವೊಂದು ತನ್ನನ್ನು ಆಂಟಿ ಎಂದು ಕರೆದಿದ್ದಕ್ಕೆ ಮಗುವನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಂತೆ.

ಈ ಕುರಿತು ಸ್ಪಷ್ಟನೆ ನೀಡಿರುವ ಸ್ವರಾ, ನಾನು ಅವಾಚ್ಯ ಶಬ್ದಗಳಿಂದ ನಿಂದಿಸಿಲ್ಲ ಎಂದು ಹೇಳಿದ್ದಾರೆ. 

ಇದರಿಂದ ಕೆರಳಿರುವ ನೆಟ್ಟಿಗರು, ಮಕ್ಕಳ ಬಗೆಗೆ ಸೂಕ್ಷ್ಮಗ್ರಾಹಿಯಲ್ಲದ ಮತ್ತು ಕ್ರೂರ ನಡೆಗಾಗಿ #Swara_Aunty ಎಂಬ ಹ್ಯಾಷ್‌ಟ್ಯಾಗ್ ಮೂಲಕ ಟೀಕಿಸಿದ್ದಾರೆ. ಮಂಗಳವಾರ ಮುಂಜಾನೆಯಿಂದಲೂ ಇದು ಟ್ರೆಂಡಿಂಗ್‌ನಲ್ಲಿದೆ.

ಈ ಸಂಬಂಧ ಲೀಗಲ್ ರೈಟ್ಸ್ ಪ್ರೊಟೆಕ್ಷನ್ ಫೋರಂ ಎಂಬ ಸ್ವಯಂ ಸೇವಾ ಸಂಸ್ಥೆ ಮಕ್ಕಳ ಹಕ್ಕುಗಳ ಸಂರಕ್ಷಣಾ ರಾಷ್ಟ್ರೀಯ ಆಯೋಗಕ್ಕೆ ದೂರು ನೀಡಿದ್ದು, ಸ್ವರಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಸ್ವರ ಅವರ ಹೇಳಿಕೆಯು ಭಾರತದ ದಕ್ಷಿಣ ಭಾಗದ ಮಕ್ಕಳ ಬಗೆಗಿನ ಜನಾಂಗೀಯ ಮತ್ತು ತಾರತಮ್ಯವನ್ನು ತೋರಿಸುತ್ತದೆ. ಹೀಗಾಗಿ ಆನ್‌ಲೈನ್‌ ಖಾತೆಗಳಿಂದ ಈ ಕುರಿತಾದ ಎಲ್ಲ ರೀತಿಯ ಮಾಹಿತಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು