ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆಬಾವಿಗೆ ಬಿದ್ದಿದ್ದ 3 ವರ್ಷದ ಕಂದ ಸುಜಿತ್ ಇನ್ನಿಲ್ಲ: ಫಲ ನೀಡದ ಕಾರ್ಯಾಚರಣೆ

Last Updated 29 ಅಕ್ಟೋಬರ್ 2019, 3:39 IST
ಅಕ್ಷರ ಗಾತ್ರ

ಚೆನ್ನೈ:ತಮಿಳುನಾಡಿನ ತಿರುಚನಾಪಳ್ಳಿ ಸಮೀಪ ಶುಕ್ರವಾರ ಕೊಳವೆಬಾವಿಗೆ ಬಿದ್ದಿದ್ದ ಎರಡು ವರ್ಷದ ಸುಜೀತ್ ವಿಲ್ಸನ್ಮೃತಪಟ್ಟಿದ್ದಾನೆಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.ಮಗುವಿನ ದೇಹ ಛಿದ್ರವಾಗಿದೆ ಮತ್ತು ಕೊಳೆತುಹೋಗಿದೆಜಿಲ್ಲಾಧಿಕಾರಿ ಜೆ.ರಾಧಾಕೃಷ್ಣ ಹೇಳಿಕೆ ನೀಡಿದ್ದಾರೆ.

‘ಮಗುವಿನ ದೇಹವನ್ನು ಮೇಲಕ್ಕೆ ತರಲು ಪ್ರಯತ್ನಗಳು ನಡೆದಿವೆ’ ಎಂದು ತಿಳಿಸಿದ್ದಾರೆ.

ಸೋಮವಾರ ರಾತ್ರಿ 10.30ಕ್ಕೆ ಕೊಳವೆಬಾವಿಯಿಂದ ಕೆಟ್ಟ ವಾಸನೆ ಬರುತ್ತಿತ್ತು. ವೈದ್ಯರು, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ದಳದಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕಿಸಿದರು.

ನಡುಕಟ್ಟುಪಟ್ಟಿ ಸಮೀಪ ಮನೆಯಲ್ಲಿಆಡುತ್ತಿದ್ದ ಮಗು ಶುಕ್ರವಾರ ಸಂಜೆ ಕೊಳವೆಬಾವಿಗೆ ಬಿದ್ದಿತ್ತು. ಕೇಂದ್ರ ಮತ್ತು ರಾಜ್ಯ–ಸರ್ಕಾರಗಳ ಹಲವು ಸಂಸ್ಥೆಗಳು ಮಗುವನ್ನು ರಕ್ಷಿಸಲು ಅವಿರತ ಶ್ರಮಿಸಿತು. ಸಾವಿರಾರು ಮಂದಿ ಮಗುಸುರಕ್ಷಿತವಾಗಿ ಹೊರಬರಲಿ ಎಂದು ಪ್ರಾರ್ಥಿಸಿದ್ದರು.ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಹ ಮಗುವಿನ ಜೀವ ಉಳಿಯಲಿ ಎಂದು ಪ್ರಾರ್ಥಿಸಿದ್ದರು.

ಕೊಳವೆಬಾವಿಯಲ್ಲಿ 88 ಅಡಿ ಆಳದಲ್ಲಿ ಬಾಲಕ ಸಿಲುಕಿದ್ದ. ಕಲ್ಮಣ್ಣು ಮತ್ತು ಮಳೆಯಿಂದಾಗಿ ಬಾಲಕನನ್ನುರಕ್ಷಿಸುವ ಕಾರ್ಯ ವಿಫಲವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT