ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಯಮತ್ತೂರು ಸೇರಿ 1018 ಸ್ಥಳನಾಮ ಬದಲಿಸಿದ ತಮಿಳುನಾಡು ಸರ್ಕಾರ

Last Updated 11 ಜೂನ್ 2020, 9:16 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡು ಸರ್ಕಾರವು ಕೊಯಮತ್ತೂರು ಸೇರಿ ಒಟ್ಟು 1,018 ನಗರ, ಪಟ್ಟಣ, ಪ್ರದೇಶಗಳ ಸ್ಥಳನಾಮಗಳನ್ನು ಬದಲಿಸಿ ಆದೇಶ ಹೊರಡಿಸಿದೆ.

ಇಂಗ್ಲಿಷ್ ಪ್ರಭಾವದಿಂದ ತಪ್ಪಾಗಿ ಉಚ್ಚಾರಣೆಯಾಗುತ್ತಿರುವ ಹೆಸರುಗಳನ್ನು ತಮಿಳಿನ ಮೂಲ ಉಚ್ಚಾರಣೆಗೆ ಅನುಗುಣವಾಗಿ ಬದಲಿಸಲಾಗುವುದು ಎಂದು ವಿಧಾನ ಪರಿಷತ್‌ನಲ್ಲಿ ಎರಡು ವರ್ಷಗಳ ಹಿಂದೆ ನೀಡಿದ್ದ ಹೇಳಿಕೆಗೆ ಅನುಗುಣವಾಗಿ ಸರ್ಕಾರದ ಈ ಆದೇಶ ಪ್ರಕಟವಾಗಿದೆ.

1,018 ಪ್ರದೇಶಗಳ ಪೈಕಿ ಕೆಲವು ಹೆಸರಗಳನ್ನು ಮಾತ್ರ ಇಡಿಯಾಗಿ ಬದಲಿಸಲಾಗಿದೆ. ಕೆಲ ನಗರ-ಪಟ್ಟಣಗಳ ಇಂಗ್ಲಿಷ್ ಸ್ಪೆಲಿಂಗ್‌ ಬದಲಿಸಲಾಗಿದೆ.

ಈವರೆಗೆ ಕೊಯಮತ್ತೂರು ನಗರಕ್ಕೆ Coimbatore ಎಂಬ ಸ್ಪೆಲಿಂಗ್ ಇತ್ತು. ಇನ್ನು ಮುಂದೆ ಅದನ್ನು Koyampuththoor (ಕೊಯಮತ್ತೂರ್) ಎಂದು ಬರೆಯಲಾಗುತ್ತದೆ. ಅದೇ ರೀತಿ Ambattur ಪಟ್ಟಣಕ್ಕೆ Ambaththoor (ಅಂಬತ್ತೂರ್) ಎಂದೂ, Vellore ನಗರವನ್ನು Veeloor (ವೆಲ್ಲೂರ್), Dindigul ಪಟ್ಟಣಕ್ಕೆThindukkal (ತಿಂಡುಕ್ಕಲ್)ಎಂದು ಮರುನಾಮಕರಣ ಮಾಡಲಾಗಿದೆ.

ಜಿಲ್ಲಾಧಿಕಾರಿಗಳಿಂದ ಬಂದ ಶಿಫಾರಸುಗಳ ಜೊತೆಗೆ ತಮಿಳು ಭಾಷೆ ಮತ್ತು ಸಂಸ್ಕೃತಿ ಸಚಿವ ಕೆ.ಪಾಂಡಿಯಾರಾನ್ ನೇತೃತ್ವದ ಉನ್ನತಾಧಿಕಾರ ಸಮಿತಿ ಈ ಹೆಸರುಗಳನ್ನುಪರಿಶೀಲಿಸಿತು.

ಮರುನಾಮಕರಣ ಮಾಡಿರುವ ಎಲ್ಲ 1,018 ಸ್ಥಳಗಳಿಗೆ ಈಗ ಇರುವ ಹೆಸರು, ಜಿಲ್ಲಾಧಿಕಾರಿ ಶಿಫಾರಸು ಮಾಡಿದ ಹೆಸರು, ತಮಿಳುನಲ್ಲಿ ಹಾಲಿ ಇರುವ ಹೆಸರು ಮತ್ತು ಸಮಿತಿಯ ಶಿಫಾರಸುಗಳನ್ನೂಸರ್ಕಾರದ ಆದೇಶವು ಉಲ್ಲೇಖಿಸಿದೆ.

ಇದೀಗ ಕಂದಾಯ ಮತ್ತು ತುರ್ತು ಪರಿಸ್ಥಿತಿ ನಿರ್ವಹಣಾ ಇಲಾಖೆ, ನಗರಾಡಳಿತ, ನೀರು ಸರಬರಾಜು, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಆದೇಶವನ್ನು ಜಾರಿ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT