ಮಂಗಳವಾರ, ನವೆಂಬರ್ 19, 2019
26 °C

ಲೈಂಗಿಕ ದೌರ್ಜನ್ಯ ಪ್ರಕರಣ: ತೇಜಪಾಲ್‌ ಅರ್ಜಿ ವಜಾ

Published:
Updated:

ಪಣಜಿ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಮುಂದೂಡುವಂತೆ ತೆಹಲ್ಕಾ ನಿಯತಕಾಲಿಕೆ ಸಂಸ್ಥಾಪಕ ತರುಣ್‌ ತೇಜಪಾಲ್‌ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ಶುಕ್ರವಾರ ವಜಾ ಮಾಡಿದೆ.

ಹೀಗಾಗಿ, ತೇಜಪಾಲ್‌ ವಿರುದ್ಧ ಮಾಜಿ ಮಹಿಳಾ ಸಹೋದ್ಯೋಗಿ ದಾಖಲಿಸಿದ್ದ ಮೊಕದ್ದಮೆಯ ವಿಚಾರಣೆ ಅಕ್ಟೋಬರ್‌ 21ರಿಂದ 23ರವರೆಗೆ ನಡೆಯಲಿದೆ.

ತಮ್ಮ ವಕೀಲರು ಇನ್ನೊಂದು ಪ್ರಕರಣ ನಡೆಸುತ್ತಿರುವುದರಿಂದ ಡಿಸೆಂಬರ್‌ 2ರ ಬಳಿಕವೇ ವಿಚಾರಣೆಗೆ ದಿನಾಂಕಗಳನ್ನು ನಿಗದಿಪಡಿಸಬೇಕು ಎಂದು ತೇಜಪಾಲ್‌ ಕೋರಿದ್ದರು.

 

ಪ್ರತಿಕ್ರಿಯಿಸಿ (+)