ಬುಧವಾರ, ಫೆಬ್ರವರಿ 26, 2020
19 °C

ವೆಂಕಯ್ಯ ನಾಯ್ಡು ಭೇಟಿ ಮಾಡಿದ ಟಿಡಿಪಿ ಸಂಸದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಟಿಡಿಪಿಯ ನಾಲ್ವರು ರಾಜ್ಯಸಭಾ ಸದಸ್ಯರು ಬಿಜೆಪಿ ಜತೆ ವಿಲೀನವಾದ ಬೆನ್ನಲ್ಲೇ ಪಕ್ಷದ ಐವರು ಸಂಸದರು ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರನ್ನು ಶುಕ್ರವಾರ ಭೇಟಿ ಮಾಡಿದರು.

ಸಂಸದರಾದ ವೈ.ಎಸ್. ಚೌಧರಿ, ಸಿ.ಎಂ. ರಮೇಶ್, ಗರಿಕಪಾಟಿ ಮೋಹನ್ ರಾವ್ ಹಾಗೂ ಟಿ.ಜಿ. ವೆಂಕಟೇಶ್ ಅವರನ್ನು ಬಿಜೆಪಿ ಸದಸ್ಯರು ಎಂಬುದಾಗಿ ರಾಜ್ಯಸಭೆಯ ವೆಬ್‌ಸೈಟ್‌ನಲ್ಲಿ ನಮೂದಿಸಲಾಗಿದೆ. 

ನಾಲ್ವರನ್ನು ಬಿಜೆಪಿ ಸದಸ್ಯರು ಎಂಬುದಾಗಿ ಗುರುತಿಸಿದ್ದರೂ, ಕಾನೂನು ಪ್ರಕಾರ ಹೆಚ್ಚು ದಿನ ಅದು ಉಳಿಯುವುದಿಲ್ಲ ಎಂದು ನಾಯ್ಡು ಅವರನ್ನು ಭೇಟಿ ಮಾಡಿದ ಟಿಡಿಪಿ ಸಂಸದರು ಹೇಳಿದರು.

ನಾಲ್ವರನ್ನೂ ಬಿಜೆಪಿ ಸದಸ್ಯರು ಎಂಬುದಾಗಿ ಗುರುತಿಸದಂತೆ ಟಿಡಿಪಿ ನಿಯೋಗ ಮನವಿಪತ್ರ ಸಲ್ಲಿಸಿತು.

ರಾಜ್ಯಸಭೆಯಲ್ಲಿ ಪಕ್ಷವನ್ನು ವಿಲೀನಗೊಳಿಸುವ ಅಧಿಕಾರ ಅವರಿಗೆ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು