ತೆಲುಗು ಸಿನಿಮಾ ನಿರ್ದೇಶಕ, ನಿರ್ಮಾಪಕ ವಿಜಯ‌ ಬಾಪಿನೀಡು ಇನ್ನಿಲ್ಲ

7

ತೆಲುಗು ಸಿನಿಮಾ ನಿರ್ದೇಶಕ, ನಿರ್ಮಾಪಕ ವಿಜಯ‌ ಬಾಪಿನೀಡು ಇನ್ನಿಲ್ಲ

Published:
Updated:
Prajavani

ಹೈದರಬಾದ್‌: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತೆಲುಗು ಸಿನಿಮಾದ ಖ್ಯಾತ  ನಿರ್ದೇಶಕ ಮತ್ತು ನಿರ್ಮಾಪಕ ವಿಜಯ‌ ಬಾಪಿನೀಡು ಅವರು ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

’ಅಮೆರಿಕದಲ್ಲಿ ನೆಲೆಸಿರುವ ಹಿರಿಯ ಮಗಳು ಭಾರತಕ್ಕೆ ಮರಳಿದ ಬಳಿಕ ಅವರ ಅಂತ್ಯಕ್ರಿಯೆ ನೆರವೇರಲಿದೆ‘ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಪಶ್ಚಿಮ ಗೋದಾವರಿ ಜಿಲ್ಲೆಯ ವಿಜಯ ಅವರು ಮೆಗಾಸ್ಟಾರ್‌ ಚಿರಂಜೀವಿ, ಶೋಭನ್‌ ಬಾಬು, ಕೃಷ್ಣ ಸೇರಿದಂತೆ ಅನೇಕ ನಾಯಕರ ಹಲವು ಸಿನಿಮಾಗಳನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದ್ದರು.

ಇವರು ನಿರ್ದೇಶಿಸಿದ ನಟ ಚಿರಂಜೀವಿ ನಟಿಸಿದ  ‘ಗ್ಯಾಂಗ್‌ಲೀಡರ್‌’ ಸಿನಿಮಾವು ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿತ್ತು. ‘ಆಜ್‌ ಕಾ ಗೂಂಡಾರಾಜ್‌’ ಹೆಸರಿನಲ್ಲಿ ಹಿಂದಿಯಲ್ಲಿ ಇದೇ ಸಿನಿಮಾ ನಿರ್ಮಾಣಗೊಂಡಿತ್ತು. ಇದಲ್ಲದೇ, ಚಿರಂಜೀವಿ ಜೊತೆಗೆ ‘ಬಿಗ್‌ಬಾಸ್‌’, ‘ಕೈದಿ ನಂ.786’, ಹಾಗೂ ‘ಮಗಧೀರುಡು’ ಕೂಡ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿತ್ತು.

ಬಾಪಿನೀಡು ಅವರ ಮೃತದೇಹಕ್ಕೆ ಚಿರಂಜೀವಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ‘ಇಂದು ನನ್ನ ಪಾಲಿಗೆ ಅತ್ಯಂತ ಕೆಟ್ಟ ದಿನ, ನನ್ನ ಕುಟುಂಬದ ಸದಸ್ಯರೊಬ್ಬರನ್ನು ಕಳೆದುಕೊಂಡ ಭಾವನೆಯಾಗುತ್ತಿದೆ’ ಎಂದರು.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !