ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ, ಹಿಮಪಾತ: ಮನಾಲಿ, ಕುಫ್ರಿಯಲ್ಲಿ ತಾಪಮಾನ ಕುಸಿತ

Last Updated 12 ಮಾರ್ಚ್ 2019, 20:19 IST
ಅಕ್ಷರ ಗಾತ್ರ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಹಿಮಪಾತ ಮತ್ತು ಸಾಧಾರಣ ಮಳೆಯಿಂದಾಗಿಮನಾಲಿ ಮತ್ತು ಕುಫ್ರಿಯಲ್ಲಿ ತಾಪಮಾನ ಸೊನ್ನೆಗಿಂತ ಕಡಿಮೆಗೆ ಕುಸಿದಿದೆ.

ಕುಲ್ಲು ಜಿಲ್ಲೆಯ ಮನಾಲಿ, ಶಿಮ್ಲಾ ಜಿಲ್ಲೆಯ ಕುಫ್ರಿ, ಚಂಬಾ ಜಿಲ್ಲೆಯ ಡಾಲ್‌ಹೌಸಿಯಲ್ಲಿ ಕ್ರಮವಾಗಿ 9, 3 ಮತ್ತು 3 ಸೆಂಟಿ ಮೀಟರ್‌ನಷ್ಟು ಹಿಮಪಾತವಾಗಿದೆ.

ಲೌಹಾಲ್‌ನ ಕೀಲಾಂಗ್‌, ಸ್ಪಿತಿ ಮತ್ತು ಕಿನ್ನೌರ್‌ನ ಕಲ್ಪಾ ಪ್ರದೇಶದಲ್ಲಿ ಸೋಮವಾರ ಸಂಜೆ 5.30ರಿಂದ ಬೆಳಿಗ್ಗೆ 8.30ರವರೆಗೆ ಕ್ರಮವಾಗಿ 15 ಮತ್ತು 24 ಸೆಂಟಿ ಮೀಟರ್‌ನಷ್ಟು ಹಿಮಪಾತವಾಗಿದೆ.

ಮನಾಲಿ ಮತ್ತು ಕಲ್ಪಾದಲ್ಲಿ ಕನಿಷ್ಠ ತಾಪಮಾನ ಕ್ರಮವಾಗಿ ಮೈನಸ್ 3.8 ಮತ್ತು 3.6 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.

ಕನಿಷ್ಠ ತಾಪಮಾನ ಮೈನಸ್ 8 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿರುವ ಕೀಲಾಂಗ್‌, ರಾಜ್ಯದ ಅತ್ಯಂತ ಶೀತ ಪ್ರದೇಶವಾಗಿ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT