ಶನಿವಾರ, ಸೆಪ್ಟೆಂಬರ್ 18, 2021
21 °C

ಇಂದು ಏಪ್ರಿಲ್‌ ಫೂಲ್‌ ಅಲ್ಲ: ಪಿಎಂಒ ಟ್ವೀಟ್‌ಗೆ ವ್ಯಂಗ್ಯವಾಡಿದ ಟಿಎಂಸಿ ಮುಖಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ‘ಪ್ರತಿಯೊಬ್ಬ ಭಾರತೀಯರಿಗಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತದೆ’ ಎಂಬ ಪ್ರಧಾನಿ ಕಚೇರಿ ಟ್ವೀಟ್‌ಗೆ ‘ಇಂದು ಏಪ್ರಿಲ್‌ 1’ ಅಲ್ಲ ಎಂದು ಟಿಎಂಸಿ ಮುಖಂಡ ಡೆರಿಕ್ ಒ ಬ್ರೇನ್ ಕಿಚಾಯಿಸಿದ್ದಾರೆ.

 

ಪ್ರಧಾನಿ ಕಚೇರಿ, ‘ನಾವೆಲ್ಲ ಒಂದೇ ಕುಟುಂಬದ ಸದಸ್ಯರು. ಇದುವೇ ಭಾರತದ ಚೇತನ. ಪ್ರತಿಯೊಬ್ಬ ಭಾರತೀಯನು ಖುಷಿ ಮತ್ತು ಆರೋಗ್ಯವಾಗಿರಬೇಕು ಎಂದೇ ನಾವು ಬಯಸುತ್ತೇವೆ. ಸಬ್‌ಕಾ ಸಾತ್‌, ಸಬ್‌ಕಾ ವಿಕಾಸ್‌, ಸಬ್‌ಕಾ ವಿಶ್ವಾಸ್‌’ ಮಾರ್ಗದರ್ಶನದಲ್ಲಿ ಭಾರತದ ಪ್ರತೀ ಪ್ರಜೆಯ ಕಲ್ಯಾಣಕ್ಕಾಗಿ ನಾವು ಕೆಲಸ ಮಾಡುತ್ತೇವೆ’ ಎಂದು ಟ್ವೀಟ್‌ನಲ್ಲಿ ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ಮುಖಂಡ ‘ಇಂದು ಏಪ್ರಿಲ್‌ 1 ಅಲ್ಲ. ಏಪ್ರಿಲ್‌ 1 ಅನ್ನು ಮೂರ್ಖರ ದಿನ ಎಂದೂ ಕರೆಯುತ್ತಾರೆ’ ಎಂದು ವ್ಯಂಗ್ಯ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು