ಮೋದಿ ವೇದಿಕೆಯಲ್ಲಿರುವಾಗಲೇ ಸಚಿವೆಯ ಮೈ ಮುಟ್ಟಿದ ತ್ರಿಪುರಾ ಸಚಿವ

ಅಗರ್ತಲ: ಪ್ರಧಾನಿ ನರೇಂದ್ರ ಮೋದಿ ವೇದಿಕೆಯಲ್ಲಿ ಉಪಸ್ಥಿತರಾಗಿದ್ದ ವೇಳೆಯೇ ತ್ರಿಪುರಾದ ಸಚಿವ ಮನೋಜ್ ಕಾಂತಿ ದೇಬ್, ಸಚಿವೆಯ ಮೈಮುಟ್ಟಿ ಅನುಚಿತವಾಗಿ ವರ್ತಿಸಿರುವುದರ ಬಗ್ಗೆ ವಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.
ಶನಿವಾರ ಅಗರ್ತಲದಲ್ಲಿ ನಡೆದ ರ್ಯಾಲಿ ವೇಳೆ ಸಚಿವ ಕಾಂತಿ ದೇಬ್ ಸಚಿವೆಯ ಮೈ ಮುಟ್ಟುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಈ ಕಾರ್ಯಕ್ರಮದಲ್ಲಿ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಕೂಡಾ ಉಪಸ್ಥಿತರಿದ್ದರು.
ಮನೋಜ್ ಕಾಂತಿ ದೇಬ್ ಲೈಂಗಿಕ ದೌರ್ಜನ್ಯವೆಸಗಿದ್ದು ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಬೇಕೆಂದು ತ್ರಿಪುರಾದ ವಿಪಕ್ಷ ಎಡರಂಗ ಸೋಮವಾರ ಒತ್ತಾಯಿಸಿದೆ.
ಈ ಪ್ರಕರಣದ ಬಗ್ಗೆ ಸಚಿವರನ್ನು ಸಂಪರ್ಕಿಸಿದರೂ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಆಡಳಿತರೂಡ ಬಿಜೆಪಿ ಸಚಿವರ ಮೇಲಿರುವ ಆರೋಪವನ್ನು ನಿರಾಕರಿಸಿದ್ದು, ಎಡರಂಗ ಚಾರಿತ್ರ್ಯ ವಧೆ ಮಾಡುತ್ತಿದೆ ಎಂದಿದೆ.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ವೇದಿಕೆಯಲ್ಲಿರುವಾಗಲೇ ಮನೋಜ್ ಕಾಂತಿ ದೇಬ್ ಅವರು ಸಚಿವೆಯ ಮೈಮುಟ್ಟಿ ಅನುಚಿತ ವರ್ತನೆ ತೋರಿದ್ದಾರೆ ಎಂದು ಎಡರಂಗದ ನಿರ್ವಾಹಕ ಬಿಜನ್ ಧಾರ್ ಮಾಧ್ಯಮದರಲ್ಲಿ ಹೇಳಿದ್ದಾರೆ.
ದೇಬ್ ಅವರು ಸಮಾಜ ಕಲ್ಯಾಣ ಮತ್ತು ಸಾಮಾಜಿಕ ಶಿಕ್ಷಣ ಸಚಿವೆ ಸಂತನಾ ಚಕ್ಮಾ ಅವರ ಸೊಂಟ ಮುಟ್ಟುತ್ತಿರುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಸಚಿವರೊಬ್ಬರು ಸಾರ್ವಜನಿಕ ಸಮಾರಂಭದಲ್ಲಿ ಸಚಿವೆಯ ಘನತೆ, ಗಾಂಭೀರ್ಯ ಮತ್ತು ಪಾವಿತ್ರ್ಯಕ್ಕೆ ಧಕ್ಕೆಯುಂಟು ಮಾಡಿದ್ದಾರೆ ಎಂದಿದ್ದಾರೆ ಧಾರ್.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.