ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ ಭಾರತ ಭೇಟಿ ಹಿನ್ನೆಲೆ: ಅಹಮದಾಬಾದ್‌ನ ಸ್ಲಂ ಕಾಣಿಸದಂತೆ ಗೋಡೆ ನಿರ್ಮಾಣ

Last Updated 15 ಫೆಬ್ರುವರಿ 2020, 2:24 IST
ಅಕ್ಷರ ಗಾತ್ರ

ಅಹಮದಾಬಾದ್‌: ‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಫೆ.24ರಂದು ಅಹಮದಾಬಾದ್‌ಗೆ ಭೇಟಿ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಬಳಿ ಇರುವ ಕೊಳೆಗೇರಿ ಕಾಣಿಸದಂತೆ ಬಿಜೆಪಿ ಆಡಳಿತವಿರುವ ಅಹಮದಾಬಾದ್‌ ಮಹಾನಗರ ಪಾಲಿಕೆ (ಎಎಂಸಿ) 500 ಮೀಟರ್‌ ಉದ್ದದ ಗೋಡೆ ನಿರ್ಮಿಸುತ್ತಿದೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

‘ಭಾರತದಲ್ಲಿನ ವಾಸ್ತವತೆಯನ್ನು ಟ್ರಂಪ್‌ ಅವರಿಂದ ಮುಚ್ಚಿಡಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ. ಬಡತನವನ್ನು ನಿರ್ಮೂಲನೆ ಮಾಡುವ ಬದಲು, ಗೋಡೆ ನಿರ್ಮಿಸಿ ಅದನ್ನು ಕಾಣದಂತೆ ಮಾಡಲಾಗುತ್ತಿದೆ’ ಎಂದು ಗುಜರಾತ್‌ ಕಾಂಗ್ರೆಸ್‌ ವಕ್ತಾರ ಮನೀಶ್‌ ದೋಶಿ ಆರೋಪಿಸಿದರು.

‘ಮೊದಲೇ ಗುತ್ತಿಗೆ ನೀಡಲಾಗಿತ್ತು’:ಈ ಆರೋಪವನ್ನು ಎಎಂಸಿ ಉಪ ಆಯುಕ್ತ ಕೆ.ಬಿ. ಥಕ್ಕರ್‌ ತಳ್ಳಿ ಹಾಕಿದ್ದು, ‘ಟ್ರಂಪ್‌ ಅವರ ಭೇಟಿಗೂ ಗೋಡೆ ನಿರ್ಮಾಣಕ್ಕೂ ಯಾವುದೇ ಸಂಬಂಧವಿಲ್ಲ. ಅಲ್ಲಿ ಮೊದಲೇ ಗೋಡೆ ಇತ್ತು. ಗೋಡೆ ಶಿಥಿಲವಾದ ಕಾರಣ ಹೊಸ ಗೋಡೆ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಒಂದು ತಿಂಗಳ ಹಿಂದೆಯೇ ಇದಕ್ಕೆ ಆನ್‌ಲೈನ್‌ ಮೂಲಕ ಟೆಂಡರ್‌ ಆಹ್ವಾನಿಸಿ, ಟ್ರಂಪ್‌ ಭೇಟಿ ಘೋಷಣೆಗೂ ಮುನ್ನವೇ ಗುತ್ತಿಗೆ ನೀಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT