ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಆರ್ಥಿಕತೆ: ಟ್ವಿಟರ್‌ನಲ್ಲಿ ಪ್ರಧಾನಿ ಕಾಲೆಳೆದ ರಾಹುಲ್ ಗಾಂಧಿ

Last Updated 3 ಫೆಬ್ರುವರಿ 2020, 7:13 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮ ಅದ್ಭುತ ವ್ಯಾಯಾಮ ದಿನಚರಿಯನ್ನು ಮುಂದುವರಿಸಿ, ಅದಾದರೂ ದೇಶದ ಆರ್ಥಿಕತೆಯನ್ನು ಸುಧಾರಿಸಬಹುದು’ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಟ್ವಿಟ್ಟರ್‌ನಲ್ಲಿ ಮೋದಿ ಕಾಲೆಳೆದಿದ್ದಾರೆ.

ಕುಸಿದಆರ್ಥಿಕತೆ ಉತ್ತೇಜನಕ್ಕೆಈ ಬಾರಿಯ ಬಜೆಟ್‌ನಲ್ಲಿ ಯಾವುದೇ ಪ್ರಮುಖ ಯೋಜನೆ ರೂಪಿಸದಿರುವುದನ್ನು ಟೀಕಿಸಿ ರಾಹುಲ್‌ ಈ ಟ್ವೀಟ್‌ ಮಾಡಿದ್ದಾರೆ.

ಡಿಯರ್ ಪ್ರಧಾನಿ,

ದಯವಿಟ್ಟು ಮೋಡಿ ಮಾಡುವ ನಿಮ್ಮ ವ್ಯಾಯಾಮಗಳನ್ನು ಮತ್ತೆ ಪ್ರಯತ್ನಿಸಿ. ನಿಮಗೆ ಗೊತ್ತಿಲ್ಲ, ಅದು ಆರ್ಥಿಕತೆಯನ್ನು ಮೇಲೆತ್ತಲೂಬಹುದು’ ಎಂದು ಒಕ್ಕಣೆ ಬರೆದು ಮೋದಿ ಅವರು ಯೋಗ ದಿನದಂದು ಪ್ರಕಟಿಸಿದ್ದ ವಿಡಿಯೊವನ್ನು ಟ್ವೀಟ್‌ ಮಾಡಿದ್ದಾರೆ.

ರಾಹುಲ್ ಅವರ ಈ ಟ್ವೀಟನ್ನು 50 ಸಾವಿರ ಮಂದಿ ಲೈಕ್‌ ಮಾಡಿದ್ದು, 11 ಸಾವಿರ ಮಂದಿ ಮರು ಟ್ವೀಟ್‌ ಮಾಡಿಕೊಂಡಿದ್ದಾರೆ. 5.6 ಸಾವಿರ ಮಂದಿ ಇದಕ್ಕೆ ಕಮೆಂಟ್ ಮಾಡಿದ್ದಾರೆ.

ಈ ಹಿಂದೆ ರ್‍ಯಾಲಿಯೊಂದರಲ್ಲಿ ಮಾತನಾಡಿದ್ದ ರಾಹುಲ್‌, ‘ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತದ ಜಿಡಿಪಿಯು ಶೇ 9ಕ್ಕೆ ಏರಿಕೆಯಾಗಿತ್ತು. ಇಡೀ ವಿಶ್ವವೇ ಆಗ ನಮ್ಮತ್ತ ತಿರುಗಿ ನೋಡುತ್ತಿತ್ತು. ಇಂದು ಜಿಡಿಪಿಯನ್ನು ಅಳೆಯಲು ವಿವಿಧ ಮಾನದಂಡಗಳನ್ನು ಬಳಸಲಾಗುತ್ತಿದೆ ಮತ್ತು ಅದರಂತೆ ಜಿಡಿಪಿ ಶೇ 5ರಷ್ಟಿದೆ. ಒಂದು ವೇಳೆ ನೀವು ಹಳೆಯ ಮಾನದಂಡಗಳನ್ನು ಬಳಸಿದ್ದೇ ಆದರೆ ಭಾರತದ ಬೆಳವಣಿಗೆ ದರವು ಶೇ 2.5ರಷ್ಟಿದೆ’ ಎಂದು ಹೇಳಿದ್ದರು.

‘ಪ್ರಧಾನಿ ನರೇಂದ್ರ ಮೋದಿ 2 ಲಕ್ಷ ಉದ್ಯೋಗ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ ಕಳೆದ ವರ್ಷ ನಮ್ಮ ಯುವಜನತೆ 1 ಲಕ್ಷ ಉದ್ಯೋಗಗಳನ್ನು ಕಳೆದುಕೊಳ್ಳುವಂತಾಯಿತು. ಪ್ರಧಾನಿ ಎಲ್ಲಿಗೇ ಹೋದರು ಕೂಡ ಸಿಎಎ, ಎನ್‌ಆರ್‌ಸಿ ಬಗ್ಗೆ ಮಾತನಾಡುತ್ತಾರೆ ಹೊರತು ಅತಿದೊಡ್ಡ ಸಮಸ್ಯೆಗಳಾದ ನಿರುದ್ಯೋಗವನ್ನು ಪ್ರಸ್ತಾಪಿಸುವುದಿಲ್ಲ’ ಎಂದು ದೂರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT