ಸೋಮವಾರ, ಜೂನ್ 14, 2021
27 °C

ಒಡಿಶಾ: ಇಬ್ಬರು ಮಾವೋ ಉಗ್ರರನ್ನು ಕಲ್ಲಿನಿಂದ ಹೊಡೆದು ಕೊಂದ ಸ್ಥಳೀಯರು

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಮಲ್ಕನಗಿರಿ(ಒಡಿಶಾ): ಇಬ್ಬರು ಮಾವೋ ಉಗ್ರರನ್ನು ಸ್ಥಳೀಯರೆ ಕಲ್ಲು ಹೊಡೆದು ಗಾಯಗೊಳಿಸಿ ಹತ್ಯೆ ಮಾಡಿರುವ ಘಟನೆ ಒಡಿಶಾದ ಮಲ್ಕನಗಿರಿ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಜಂತುರಯ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಮಾವೋವಾದಿ ಉಗ್ರರು ಗ್ರಾಮಕ್ಕೆ ಬಂದು ಸ್ಥಳೀಯರನ್ನು ಗಣರಾಜ್ಯೋತ್ಸವ ಆಚರಿಸದಂತೆ ಬೆದರಿಕೆ ಹಾಕಿದ್ದರು. ಅಲ್ಲದೆ, ರಸ್ತೆ ಕಾಮಗಾರಿ ನಡೆಯುವುದನ್ನು ವಿರೋಧಿಸಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಇದಲ್ಲದೆ, ಗ್ರಾಮದ ಜನರತ್ತ ಬಂದೂಕಿನಿಂದ ಗುಂಡು ಹಾರಿಸಿದ್ದರು. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಇಬ್ಬರತ್ತ ಕಲ್ಲುತೂರಾಟ ನಡೆಸಿದರು. ಪರಿಣಾಮ ತೀವ್ರ ಗಾಯಗೊಂಡ ಉಗ್ರರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಛತ್ತೀಸ್‍ಗಡದಲ್ಲಿ ಮಾವೋ ದಾಳಿ: ದೂರದರ್ಶನದ ಛಾಯಾಗ್ರಾಹಕ, ಇಬ್ಬರು ಪೊಲೀಸರು ಸಾವು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು