ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತ: ಇಬ್ಬರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆ 

Last Updated 13 ಫೆಬ್ರುವರಿ 2020, 11:25 IST
ಅಕ್ಷರ ಗಾತ್ರ

ಕೋಲ್ಕತ್ತ: ಬ್ಯಾಂಕಾಕ್‌ನಿಂದ ಇಲ್ಲಿನ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅಂತರರಾಷ್ಟ್ರೀಯ (ಎನ್‌ಎಸ್‌ಸಿಬಿಐ) ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಬ್ಬರು ಪ್ರಯಾಣಿಕರಲ್ಲಿ ಕೊರೊನಾ ವೈರಸ್ (ಕೋವಿದ್‌–19ವೈರಸ್‌) ಸೋಂಕು ದೃಢಪಟ್ಟಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಒಟ್ಟಾರೆ ಇಲ್ಲಿಯವರೆಗೂ ಕೋಲ್ಕತ್ತದಲ್ಲಿ ಮೂವರು ಪ್ರಯಾಣಿಕರಲ್ಲಿ ಸೋಂಕು ಪತ್ತೆಯಾಗಿದೆ. ‘ಮಂಗಳವಾರ ಹಿಮಾದ್ರಿ ಬರ್ಮನ್‌ ಎಂಬುವವರಲ್ಲಿ ಹಾಗೂ ಬುಧವಾರ ನಾಗೇಂದ್ರ ಸಿಂಗ್‌ ಎಂಬುವವರಲ್ಲಿ ಸೋಂಕು ಪತ್ತೆಯಾಗಿತ್ತು. ಇಬ್ಬರನ್ನೂ ಬೇಲಿಯಾಘಾಟ್‌ ಐಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ಇಲ್ಲಿಗೆ ಬಂದಿಳಿದ ಅನಿತಾ ಎಂಬುವವರಲ್ಲೂ ಸೋಂಕು ಪತ್ತೆಯಾಗಿತ್ತು’ ಎಂದು ನಿಲ್ದಾಣದ ನಿರ್ದೇಶಕ ಕೌಶಿಕ್‌ ಭಟ್ಟಾಚಾರ್ಜಿ ತಿಳಿಸಿದರು.

ಈಗಾಗಲೇ ಕೋಲ್ಕತ್ತ–ಚೀನಾದ ವಿವಿಧ ನಗರಗಳನಡುವಿನ ವಿಮಾನ ಹಾರಾಟವನ್ನು ಇಂಡಿಗೊ ಹಾಗೂ ಚೈನಾ ಈಸ್ಟರ್ನ್‌ ಏರ್‌ಲೈನ್ಸ್‌ ಸಂಸ್ಥೆಗಳು ರದ್ದುಗೊಳಿಸಿವೆ. ಜ.17ರಿಂದ ಹಾಂಗ್‌ಕಾಂಗ್‌, ಸಿಂಗಪುರದಿಂದ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT