ಎಸ್‌ಪಿ–ಬಿಎಸ್‌ಪಿ ಜಂಟಿಯಾಗಿ ಚುನಾವಣಾ ರ‍್ಯಾಲಿ ಆಯೋಜನೆ: ಅಖಿಲೇಶ್‌ ಯಾದವ್

ಶನಿವಾರ, ಮಾರ್ಚ್ 23, 2019
31 °C

ಎಸ್‌ಪಿ–ಬಿಎಸ್‌ಪಿ ಜಂಟಿಯಾಗಿ ಚುನಾವಣಾ ರ‍್ಯಾಲಿ ಆಯೋಜನೆ: ಅಖಿಲೇಶ್‌ ಯಾದವ್

Published:
Updated:

ಲಖನೌ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಸಮಾಜವಾದಿ ಪಾರ್ಟಿ(ಎಸ್‌ಪಿ) ಮತ್ತು ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) ಪ್ರಚಾರ ರ‍್ಯಾಲಿಗಳನ್ನು ಜಂಟಿಯಾಗಿ ನಡೆಸಲಿವೆ ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಗುರುವಾರ ಹೇಳಿದ್ದಾರೆ.

‘ಉತ್ತರ ಪ್ರದೇಶದಲ್ಲಿ ಜಂಟಿಯಾಗಿ ರ‍್ಯಾಲಿ ನಡೆಸಲು ನಿರ್ಧರಿಸಿದ್ದೇವೆ’ ಎಂದು ಅಖಿಲೇಶ್‌ ಯಾದವ್‌ ಅವರು ಹೇಳಿದ್ದಾಗಿ ಎಎನ್‌ಐ ವರದಿ ಮಾಡಿದೆ.

ಈ ಸಂಬಂಧ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರ ಜತೆ ನಡೆದ ಸಭೆಯಲ್ಲಿ ಚರ್ಚಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.  

ಬುಧವಾರ ನಡೆದ ಸಭೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ವಿರೋಧಿಗಳನ್ನು ಮಣಿಸಲು ಕಾರ್ಯತಂತ್ರಗಳ ರಚನೆ ಬಗ್ಗೆ ಚರ್ಚಿಸಲಾಯಿತು ಮತ್ತು ಎಸ್‌ಪಿ–ಬಿಎಸ್‌ಪಿ ಜಂಟಿಯಾಗಿ ರ‍್ಯಾಲಿ ಆಯೋಜಿಸುವ ಕುರಿತೂ ತೀರ್ಮಾನಿಸಲಾಯಿತು ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ಎಸ್‌ಪಿ 37 ಕ್ಷೇತ್ರ, ಬಿಎಸ್‌ಪಿ 38 ಕ್ಷೇತ್ರಗಳ ಸೀಟುಗಳನ್ನು ಹಂಚಿಕೊಂಡಿದ್ದು, ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಮಥುರಾ, ಮುಜಾಫರ್‌ಪುರ ಮತ್ತು ಬಾಗಪತ್‌ ಈ ಮೂರು ಕ್ಷೇತ್ರಗಳನ್ನು ಆರ್‌ಎಲ್‌ಡಿಗೆ ಬಿಟ್ಟುಕೊಟ್ಟಿವೆ. ಅಮೇಥಿ ಮತ್ತು ರಾಯ್‌ ಬರೇಲಿ ಈ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿವೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !