ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡ: ಲಾಕ್‌ಡೌನ್ ಉಲ್ಲಂಘನೆ 6 ತಿಂಗಳ ಶಿಶು, 3ವರ್ಷದ ಮಗು ವಿರುದ್ಧ ಕೇಸ್

Last Updated 24 ಏಪ್ರಿಲ್ 2020, 3:40 IST
ಅಕ್ಷರ ಗಾತ್ರ

ಉತ್ತರಕಾಶಿ(ಉತ್ತರಾಖಂಡ): ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಆರು ತಿಂಗಳ ಶಿಶು, ಮೂರು ವರ್ಷದ ಮಗು ಸೇರಿದಂತೆ 51 ಮಂದಿಯ ವಿರುದ್ಧ ಇಲ್ಲಿನ ಉತ್ತರಕಾಶಿ ಕಂದಾಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಈ ಸಮಯದಲ್ಲಿ ಜನರು ಹೊರಗೆ ಬರದಂತೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗಿದೆ.ಆದರೆ, ಇಲ್ಲಿನ ಉತ್ತರಕಾಶಿಯಲ್ಲಿ ಗುಂಪುಗುಂಪಾಗಿ ಜನರಓಡಾಟ ಹೆಚ್ಚಾಗಿತ್ತು. ಈ ಕಾರಣದಿಂದಾಗಿ ಅಧಿಕಾರಿಗಳು ಒಂದು ಕುಟುಂಬ ಸೇರಿದಂತೆ ಸುಮಾರು 51 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣ ದಾಖಲಿಸಿಕೊಳ್ಳುವಾಗ ಆರು ತಿಂಗಳ ಶಿಶು, 3 ವರ್ಷದ ಮಗು, ಎಂಟು ವರ್ಷದ ಬಾಲಕ ಎಂದು ಬರೆಯಲಾಗಿದೆ. ಇದರಿಂದಾಗಿ ಪ್ರಕರಣ ಪರಿಣಾಮ ಈ ಮಕ್ಕಳಿಗೂ ಅನ್ವಯವಾಗುತ್ತದೆ ಎನ್ನಲಾಗಿದೆ.ಆದರೆ, ಅಧಿಕಾರಿಗಳು, ಬಾಲಾಪರಾಧ ಕಾಯ್ದೆ ಪ್ರಕಾರ ಮಕ್ಕಳ ವಿರುದ್ಧ ಪ್ರಕರಣ ದಾಖಲಿಸಲಾಗಿಲ್ಲ. ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT