ಗುರುವಾರ , ಜುಲೈ 29, 2021
20 °C
ಲಾಕ್‌ಡೌನ್ ಮಾರ್ಗಸೂಚಿ ಉಲ್ಲಂಘನೆ

ಉತ್ತರ ಪ್ರದೇಶ | ಕೊಡಲಿಯಿಂದ ಕೇಕ್ ಕತ್ತರಿಸಿದ ಮಾಜಿ ಶಾಸಕ ಗುಡ್ಡು ಪಂಡಿತ್!

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

video grab

ಲಖನೌ: ಉತ್ತರ ಪ್ರದೇಶದ ಮಾಜಿ ಶಾಸಕ, ಮಾಜಿ ರೌಡಿಶೀಟರ್ ಗುಡ್ಡು ಪಂಡಿತ್ ತಮ್ಮ ಹುಟ್ಟುಹಬ್ಬದ ಕೇಕ್ ಅನ್ನು ಕೊಡಲಿಯಿಂದ ಕತ್ತರಿಸುವ ಮೂಲಕ ಸುದ್ದಿಯಾಗಿದ್ದಾರೆ. 

ಸದಾ ಬಂದೂಕು ಮತ್ತು ಪಿಸ್ತೂಲುಗಳ ನಡುವೆಯೇ ಇರುವ ಗುಡ್ಡು ಪಂಡಿತ್, ಮಂಗಳವಾರ ನೊಯ್ಡಾ ಜಿಲ್ಲೆಯ ಗೌತಮ ಬುದ್ಧ ನಗರದ ಎಕ್ಸ್‌ಪ್ರೆಸ್ ವೇನಲ್ಲಿ ತಮ್ಮ ಬೆಂಬಲಿಗರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಈ ವೇಳೆ ಅಭಿಮಾನಿಗಳ ಹರ್ಷೋದ್ಗಾರಗಳ ನಡುವೆ ಗುಡ್ಡು ತಮ್ಮ ಕಾರಿನ ಬಾನೆಟ್ ಮೇಲಿಟ್ಟಿರುವ ಕೇಕ್ ಅನ್ನು ಕೊಡಲಿಯಂದ ಕತ್ತರಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 

ವಿಡಿಯೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಲಾಕ್‌ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘನೆಯ ಆರೋಪದ ಮೇರೆಗೆ ಗುಡ್ಡು ಪಂಡಿತ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. 

‘ಬುಲಂದ್‌ಶಹರ್‌ಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಅಭಿಮಾನಿಗಳು ನನ್ನನ್ನು ಕಾರಿನಿಂದ ಕೆಳಗಿಳಿಸಿ, ಇಂದು ನಿಮ್ಮ ಹುಟ್ಟು ಹಬ್ಬ ಎಂದರು. ನಂತರ ಸ್ನೇಹಿತರು ತಮ್ಮೊಂದಿಗೆ ತಂದಿದ್ದ ಕೇಕ್ ಅನ್ನು ಕತ್ತರಿಸುವಂತೆ ಹೇಳಿದರು’ ಎಂದು ಗುಡ್ಡು ಪಂಡಿತ್ ತಿಳಿಸಿದ್ದಾರೆ. 

ಬುಲಂದ್‌ಶಹರ್ ಜಿಲ್ಲೆಯ ದಿಬೈ ವಿಧಾನಸಭಾ ಕ್ಷೇತ್ರದಿಂದ ಗುಡ್ಡುಪಂಡಿತ್ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮಾಜಿ ರೌಡಿಶೀಟರ್ ಆಗಿರುವ ಗುಡ್ಡು ವಿರುದ್ಧ ಅತ್ಯಾಚಾರ, ಕೊಲೆ ಯತ್ನ, ಲೂಟಿ, ಬೆದರಿಕೆ ಸೇರಿದಂತೆ ಎರಡು ಡಜನ್‌ಗಳಿಗೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು