ಶನಿವಾರ, ಡಿಸೆಂಬರ್ 14, 2019
21 °C

ಯೋಧರಿಗೆ ನೆರವಾಗುವಂತ ಐರನ್ ಮ್ಯಾನ್ ಸೂಟ್‌ ಸಿದ್ಧಪಡಿಸಿದ ವಾರಣಾಸಿ ವ್ಯಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾರಣಾಸಿ: ಶತ್ರುಗಳೊಂದಿಗಿನ ಗುಂಡಿನ ಚಕಮಕಿ ವೇಳೆ ಭಾರತೀಯ ಯೋಧರಿಗೆ ಉಪಯೋಗವಾಗಲಿ ಎನ್ನುವ ಉದ್ದೇಶದೊಂದಿಗೆ ಐರನ್ ಮ್ಯಾನ್ ಫ್ರಾಂಚೈಸಿಯಿಂದ ಸ್ಫೂರ್ತಿಗೊಂಡ ಖಾಸಗಿ ವಿಶ್ವವಿದ್ಯಾಲಯದ ಅರೆಕಾಲಿಕ ಉದ್ಯೋಗಿಯೊಬ್ಬರು ಐರನ್ ಮ್ಯಾನ್‌ ಸೂಟ್ ಅನ್ನು ಅಭಿವೃದ್ಧಿ ಪಡಿಸಿದ್ದಾರೆ.

ಅಶೋಕ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿರುವ ಶ್ಯಾಮ್ ಚೌರಾಸಿಯ, ಭಾರತೀಯ ಯೋಧರನ್ನು ತಲೆಯಲ್ಲಿಟ್ಟುಕೊಂಡು ಸೂಟ್‌ನ ಮೂಲ ಮಾದರಿಯನ್ನು ಸಿದ್ಧಪಡಿಸಿದ್ದಾರೆ.

ಎಎನ್ಐ‌ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ಇದೊಂದು ಲೋಹದ ಸೂಟ್ ಆಗಿದ್ದು, ಉಗ್ರರು ಅಥವಾ ಶತೃಗಳೊಂದಿಗಿನ ಗುಂಡಿನ ಚಕಮಕಿ ಸಮಯದಲ್ಲಿ ಭಾರತೀಯ ಯೋಧರಿಗೆ ನೆರವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದೊಂದು ಮಾದರಿಯಷ್ಟೆ, ಆದರೆ ಇದು ಹೋರಾಟದ ವೇಳೆಯಲ್ಲಿ ಸೈನಿಕರಿಗೆ ನೆರವಾಗುತ್ತದೆ ಎಂದು ತಿಳಿಸಿದ್ದಾರೆ.

ಇದರಲ್ಲಿ ಗೇರ್ ಮತ್ತು ಮೋಟರ್‌ಗಳನ್ನು ಬಳಸಿದ್ದೇವೆ. ಮೊಬೈಲ್ ಸಂಪರ್ಕವನ್ನು ಹೊಂದಿದ್ದು, ದೂರದಿಂದಲೇ ಬಳಸಬಹುದಾಗಿದೆ. ಇದು ಸಂವೇದಕ(ಸೆನ್ಸಾರ್‌)ಗಳನ್ನು ಹೊಂದಿದ್ದು, ಹಿಂಭಾಗದಿಂದ ಯೋಧರ ಮೇಲೆ ಆಗುವ ಆಕ್ರಮಣಗಳನ್ನು ಗ್ರಹಿಸಲು ಸಹಾಯ ಮಾಡುತ್ತದೆ. ತವರದಿಂದ ಈ ಸೂಟ್‌ ಅನ್ನು ಸಿದ್ಧಪಡಿಸಲಾಗಿದ್ದು, ಇದೀಗ ಇದೇ ಮಾದರಿಯ ಮೇಲೆ ಕೆಲಸ ಮಾಡಲು ಶ್ಯಾಮ್ ಹಣಕಾಸಿನ ನೆರವಿಗೆ ಎದುರು ನೋಡುತ್ತಿದ್ದಾರೆ.

ದೇಶದ ಶತ್ರುಗಳ ಪ್ರತಿರೋಧಕವಾಗಿ ಸೂಟ್ ಕೆಲಸ ಮಾಡುತ್ತದೆ ಮತ್ತು ಯೋಧರ ಮನೋಸ್ಥೈರ್ಯವನ್ನು ಹೆಚ್ಚಿಸುವ ಮೂಲಕ ಅವರ ಪ್ರಾಣ ರಕ್ಷಕವಾಗಿಯೂ ಬಳಕೆಯಾಗುತ್ತದೆ.

ಈ ಸೂಟ್ ಕುರಿತು ಗಮನ ಹರಿಸುವಂತೆ ಮತ್ತು ಯೋಧರಿಗೆ ಸಹಾಯ ಮಾಡಲು ಈ ಮಾದರಿಯನ್ನು ನಿರ್ಮಿಸಲು ಸರ್ಕಾರಿ ಸಂಸ್ಥೆಗಳಾದ ಡಿಆರ್‌ಡಿಒಗೆ ಈ ಮೂಲಕ ಒತ್ತಾಯಿಸುತ್ತೇನೆ. ಪಾಕಿಸ್ತಾನ ಸೇರಿದಂತೆ ಇತರೆ ದೇಶಗಳು ಈ ಮಾದರಿಯ ಬಗ್ಗೆ ಕೆಲಸ ಮಾಡುತ್ತಿವೆ. ಯೋಧರ ಜೀವಕ್ಕೆ ಜಾಸ್ತಿ ಬೆಲೆಯಿದೆ. ಈಗ ನಾನೇನು ಮಾಡಿದ್ದೇನೆ ಅದು ಕೇವಲ ಡಿಆರ್‌ಡಿಒ ಮತ್ತು ಇತರೆ ಸಂಸ್ಥೆಗಳ ಗಮನ ಸೆಳೆಯುವ ಪ್ರಯತ್ನವಷ್ಟೆ ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು