ನಮಗೆ ಅಲಿ, ಬಜರಂಗಬಲಿ ಬೇಕು, ಅನಾರ್ಕಲಿ ಬೇಡ: ಅಬ್ದುಲ್ಲಾ ಅಜಂ ಖಾನ್

ಭಾನುವಾರ, ಮೇ 26, 2019
33 °C

ನಮಗೆ ಅಲಿ, ಬಜರಂಗಬಲಿ ಬೇಕು, ಅನಾರ್ಕಲಿ ಬೇಡ: ಅಬ್ದುಲ್ಲಾ ಅಜಂ ಖಾನ್

Published:
Updated:

ನವದೆಹಲಿ: ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ರ ಪುತ್ರ ಅಬ್ದುಲ್ಲಾ ಅಜಂ ಖಾನ್, ರಾಮ್‌ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಯಪ್ರದಾರನ್ನು ಅನಾರ್ಕಲಿ ಎಂದಿದ್ದಾರೆ.

ರಾಮ್‌ಪುರದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅಬ್ದುಲ್ಲಾ ಅಜಂ ಖಾನ್, ಅಲಿ ಭೀ ಹಮಾರೆ, ಬಜರಂಗೀ ಭೀ ಹಮಾರೆ. ಹಮೇ ಅಲೀ ಭೀ ಚಾಹಿಯೇ, ಬಜರಂಗಿ ಭೀ ಚಾಹಿಯೇ. ಲೇಖಿನ್ ಅನಾರ್ಕಲಿ ನಹೀ ಚಾಹೀಯೆ (ಅಲಿಯೂ ನಮ್ಮದೇ, ಬಜರಂಗಿಯೂ ನಮ್ಮದೇ. ನಮಗೆ ಅಲಿಯೂ ಬೇಕು, ಬಜರಂಗಿಯೂ ಬೇಕು. ಆದರೆ ಅನಾರ್ಕಲಿ ಬೇಡ) ಎಂದು ಜಯಪ್ರದಾ ಅವರನ್ನು ಪರೋಕ್ಷವಾಗಿ ಅನಾರ್ಕಲಿ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಯಿಸಿದ ಜಯಪ್ರದಾ ಅಪ್ಪನಂತೆ ಮಗ ಎಂದಿದ್ದಾರೆ.

ಇದಕ್ಕೆ ನಾನು ನಗಬೇಕೋ ಅಳಬೇಕೋ ಎಂದು ಗೊತ್ತಾಗುತ್ತಿಲ್ಲ, ಅಪ್ಪನಂತೆ ಮಗ. ನಾನು ಇದನ್ನು ಅಬ್ದುಲ್ಲಾರಿಂದ ನಿರೀಕ್ಷಿಸಿರಲಿಲ್ಲ. ಅವರೊಬ್ಬ ವಿದ್ಯಾವಂತ. ನಿಮ್ಮ ಅಪ್ಪ ನನ್ನನ್ನು ಆಮ್ರಪಾಲಿ ಅಂತಾರೆ, ನೀನು ಅನಾರ್ಕಲಿ ಅಂತಿದ್ದೀ. ಸಮಾಜದಲ್ಲಿರುವ ಮಹಿಳೆಯರ ಜತೆ ವರ್ತಿಸುವ ರೀತಿನಾ ಇದು? ಎಂದು ಜಯಪ್ರದಾ ಎಎನ್‌ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

ಜಯಪ್ರದಾ ಅವರನ್ನು ಅನಾರ್ಕಲಿ ಎಂದು ಹೇಳಿದ ಅಬ್ದುಲ್ಲಾ ಅಜಂ ಖಾನ್ ವಿರುದ್ಧ ದೂರು ದಾಖಲಿಸಲಾಗಿದೆ. ಇದಕ್ಕೆ ವಿಡಿಯೊ ಸಾಕ್ಷ್ಯವನ್ನೂ ನೀಡಲಾಗಿದೆ ಎಂದು ರಾಮ್‌ಪುರ್ ಜಿಲ್ಲಾ ಮೆಜಿಸ್ಟ್ರೇಟ್ ಅಂಜನಯ್ ಕುಮಾರ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !