ಭಾನುವಾರ, ಡಿಸೆಂಬರ್ 15, 2019
26 °C

5 ರಾಜ್ಯಗಳ ಮತಗಟ್ಟೆ ಸಮೀಕ್ಷೆ: ‘ಕಮಲ’ಕ್ಕೆ ಎಚ್ಚರಿಕೆ ಕಾಂಗ್ರೆಸ್‌ ಅಲ್ಪ ಚೇತರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಸೆಮಿಫೈನಲ್‌ ಎಂದೇ ಬಿಂಬಿತವಾಗಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆ ಕೇಂದ್ರದ ಆಡಳಿತಾರೂಢ ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಮತಗಟ್ಟೆ ಸಮೀಕ್ಷೆಯ ಸರಾಸರಿ ಸಮೀಕ್ಷೆಯ ಪ್ರಕಾರ, ಮೂರು ಅವಧಿಯಿಂದ ಬಿಜೆಪಿ ಅಧಿಕಾರದಲ್ಲಿರುವ ಮಧ್ಯ ಪ್ರದೇಶ ಮತ್ತು ಛತ್ತೀಸಗಡದಲ್ಲಿ ಯಾವ ಪಕ್ಷಕ್ಕೂ ಬಹುಮತ ಇಲ್ಲ.

ಬಿಜೆಪಿ ಆಳ್ವಿಕೆ ಇರುವ ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ಸರಳ ಬಹುಮತ ದೊರೆಯಲಿದ್ದರೂ ಎರಡು ಅವಧಿಯಿಂದ ಅಧಿಕಾರದಲ್ಲಿರುವ ಮಿಜೋರಾಂ ಅನ್ನು ಕಳೆದುಕೊಳ್ಳಲಿದೆ. ತೆಲಂಗಾಣದಲ್ಲಿ ಕೆ. ಚಂದ್ರಶೇಖರ ರಾವ್‌ ನೇತೃತ್ವದ ಟಿಆರ್‌ಎಸ್‌ ಎರಡನೇ ಅವಧಿಗೆ ಅಧಿಕಾರ ಉಳಿಸಿಕೊಳ್ಳಲಿದೆ.

* ಇದನ್ನೂ ಓದಿ: ಐದು ರಾಜ್ಯ ಮತದಾನ ಪೂರ್ಣ: ಫಲಿತಾಂಶಕ್ಕೆ ಎಲ್ಲರ ಕಾತರ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು