ಹರತಾಳಕ್ಕೆ ಬೆಂಬಲವಿಲ್ಲ: ಅಂಗಡಿಗಳು ತೆರೆಯುವುದಾಗಿ ಹೇಳಿದ ವ್ಯಾಪಾರಿಗಳು

7

ಹರತಾಳಕ್ಕೆ ಬೆಂಬಲವಿಲ್ಲ: ಅಂಗಡಿಗಳು ತೆರೆಯುವುದಾಗಿ ಹೇಳಿದ ವ್ಯಾಪಾರಿಗಳು

Published:
Updated:

ತಿರುವನಂತಪುರಂ: ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿರುವುದನ್ನು ಪ್ರತಿಭಟಿಸಿ ಶಬರಿಮಲೆ ಕರ್ಮ ಸಮಿತಿ ಆಹ್ವಾನ ನೀಡಿರುವ ಹರತಾಳಕ್ಕೆ ನಮ್ಮ ಬೆಂಬಲ ಇಲ್ಲ ಎಂದು ವ್ಯಾಪಾರಿ ಸಂಘಟನೆಗಳು ಹೇಳಿವೆ. ಕೇರಳದ ವ್ಯಾಪಾರಿ ವ್ಯವಸಾಯಿ ಸಂಘಟನೆಯಲ್ಲಿರುವ ಅಂಗಡಿಗಳು ಗುರುವಾರ ತೆರೆಯಲಿವೆ.

ಅದೇ ವೇಳೆ ವ್ಯವಸಾಯಿ ಏಕೋಪನ ಸಮಿತಿ ಈ ಹರತಾಳಕ್ಕೆ ಸಹಕಾರ ನೀಡುವುದಿಲ್ಲ ಎಂದು ಸಂಘಟನೆಯ ಅಧ್ಯಕ್ಷ ಟಿ. ನಾಸಿರುದ್ದೀನ್ ಹೇಳಿರುವುದಾಗಿ ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ಹರತಾಳಕ್ಕೆ ಬೆಂಬಲ ನೀಡುವುದಿಲ್ಲ ಎಂದು ಕ್ಯಾಲಿಕಟ್ ಚೇಂಬರ್ ಆಫ್ ಕಾಮರ್ಸ್ ಹೇಳಿದೆ. ಕೋಯಿಕ್ಕೋಡ್‍ನ ಮಿಠಾಯಿ ರಸ್ತೆ ಸೇರಿದಂತೆ ಉಳಿದ ಭಾಗಗಳಲ್ಲೂ ಅಂಗಡಿಗಳು ತೆರೆದು ಕಾರ್ಯವೆಸಗಲಿವೆ.

ಪದೇ ಪದೇ ಹರತಾಳಗಳು ನಡೆಯುತ್ತಿರುವುದರಿಂದ ಈ ರೀತಿಯ ಹರತಾಳಕ್ಕೆ ನಮ್ಮ ಬೆಂಬಲವಿಲ್ಲ ಎಂದು ವ್ಯಾಪಾರಿ ಸಂಘಟನೆಗಳು ಹೇಳಿವೆ. 

ಬರಹ ಇಷ್ಟವಾಯಿತೆ?

 • 23

  Happy
 • 2

  Amused
 • 1

  Sad
 • 1

  Frustrated
 • 3

  Angry

Comments:

0 comments

Write the first review for this !