ಮಂಗಳವಾರ, ಮಾರ್ಚ್ 28, 2023
33 °C

ಭಾರತಕ್ಕೆ ಬಂದಿಳಿದಿರುವ ಅಮೆರಿಕ ಅಧ್ಯಕ್ಷರ ವಿಶೇಷ ಹೆಲಿಕಾಪ್ಟರ್‌ ಬಗ್ಗೆ ಗೊತ್ತೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಎರಡು ದಿನಗಳ ಪ್ರವಾಸಕ್ಕಾಗಿ ಇದೇ 24ರಂದು ಭಾರತಕ್ಕೆ ಆಗಮಿಸುತ್ತಿದ್ದಾರೆ. ಅವರ ಆಗಮನಕ್ಕೂ ಮೊದಲೇ ಮೆರೈನ್‌–ಒನ್‌ ಹೆಸರಿನ ವಿಶೇಷ ಹೆಲಿಕಾಪ್ಟರ್‌ ಗುಜರಾತ್‌ಗೆ ಬಂದಿಳಿದಿದೆ. 

ಗುಜರಾತ್‌ನ ಮೊಟೆರಾ ಕ್ರೀಡಾಂಗಣದಿಂದ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅಂತಾರಾಷ್ಟ್ರೀಯ ವಿಮಾನಕ್ಕೆ ತೆರಳಲು ಅವರು ಈ ವಿಶೇಷ ಹೆಲಿಕಾಪ್ಟರ್‌ ಅನ್ನು ಬಳಸಲಿದ್ದಾರೆ. 


ಪತ್ನಿಯೊಂದಿಗೆ ಹೆಲಿಕಾಪ್ಟರ್‌ ಏರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 

ಅಮೆರಿಕ ಅಧ್ಯಕ್ಷರ ಪ್ರಯಾಣಕ್ಕಾಗಿ ಬಳಕೆಯಾಗುವ ಅಧಿಕೃತ ಹೆಲಿಕಾಪ್ಟರ್‌ ಈ ಮೆರೈನ್‌ ಒನ್‌ ವಿಶೇಷತೆಗಳ ಆಗರ. ಅದರ ಪಟ್ಟಿ ಇಲ್ಲಿದೆ. 

–  VH-60N ಮಾದರಿಯ ಅಮೆರಿಕ ಅಧ್ಯಕ್ಷರ ಈ ಹೆಲಿಕಾಪ್ಟರ್‌ ಮಿಲಿಟರಿ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಹೊಂದಿದೆ. 

– 14 ಪ್ರಯಾಣಿಕರು ಇದರಲ್ಲಿ ಒಟ್ಟಿಗೆ ಪ್ರಯಾಣಿಸಬಹುದು. 

– ಹೆಲಿಕಾಪ್ಟರ್‌ನ ಸದ್ದು ಒಳಗೆ ಕೇಳಿಸದಂತೆ ವ್ಯವಸ್ಥೆ ಮಾಡಲಾಗಿದ್ದು, ಅಧ್ಯಕ್ಷರು ಮೆಲು ದನಿಯಲ್ಲೂ ಮಾತನಾಡಬಹುದು. 

– ಭದ್ರತೆಯ ದೃಷ್ಟಿಯಿಂದಾಗಿ ಈ ಹೆಲಿಕಾಪ್ಟರ್‌ ಒಂದೇ ಮಾದರಿಯ ಇತರ ಐದು ಹೆಲಿಕಾಪ್ಟರ್‌ಗಳೊಂದಿಗೆ ಹಾರಾಟ ನಡೆಸುತ್ತದೆ. ಒಂದರಲ್ಲಿ ಅಧ್ಯಕ್ಷರಿದ್ದರೆ, ಉಳಿದವು ಬೆಂಗಾವಲಾಗಿ ಕಾರ್ಯನಿರ್ವಹಿಸುತ್ತವೆ. ಈ ಭದ್ರತಾ ತಂತ್ರವನ್ನು ಅಧ್ಯಕ್ಷರ ‘ಶೆಲ್‌ ಗೇಮ್‌‘ ಎಂದು ಕರೆಯಲಾಗುತ್ತದೆ. 

– ಈ ಹೆಲಿಕಾಪ್ಟರ್‌ ಹಾರಿಸುವ ಅವಕಾಶವಿರುವುದು ಎಚ್‌ಎಂಎಕ್ಷ್‌–1 ಸ್ಕ್ವಾಡ್ರನ್‌ನ(ಅಮೆರಿಕದ ವಿಶೇಷ ವ್ಯಕ್ತಿಗಳ ವೈಮಾನಿಕ ಹಾರಾಟದ ಹೊಣೆ ಹೊತ್ತಿರುವ ಸಂಸ್ಥೆ) ನಾಲ್ವರು ಪೈಲಟ್‌ಗಳಿಗೆ ಮಾತ್ರ. 
 

ಮೆರೈನ್‌ ಒನ್‌ ಮತ್ತು ಬೆಂಗಾವಲು ಹೆಲಿಕಾಪ್ಟರ್‌ಗಳ ಹಾರಾಟದ ದೃಶ್ಯಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು