ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯದಲ್ಲಿ ವನ್ಯ ಸಂಪತ್ತು: ಸ್ಯಾಮ್ಯುಯೆಲ್‌ ವಾಸೆರ್‌

Last Updated 22 ಜೂನ್ 2019, 17:56 IST
ಅಕ್ಷರ ಗಾತ್ರ

ಮುಂಬೈ: ಜಾಗತಿಕ ಮಟ್ಟದಲ್ಲಿ ವನ್ಯ ಪ್ರಾಣಿಗಳು ಮತ್ತು ಅರಣ್ಯ ಸಂಪತ್ತಿನ ಅಕ್ರಮ ವಹಿವಾಟಿನ ವಾರ್ಷಿಕ ಮೊತ್ತವು ₹ 1.40 ಲಕ್ಷ ಕೋಟಿ ಮೀರಿದ್ದು, ವೇಗವಾಗಿ ಇದರ ಪ್ರಮಾಣ ಏರಿಕೆಯಾಗುತ್ತಿದೆ ಎಂದು ವಾಷಿಂಗ್ಟನ್‌ ವಿಶ್ವವಿದ್ಯಾಲಯದಲ್ಲಿ ಸಂರಕ್ಷಣ ಜೀವಶಾಸ್ತ್ರ ವಿಭಾಗದ ನಿರ್ದೇಶಕ ಡಾ. ಸ್ಯಾಮ್ಯುಯೆಲ್‌ ವಾಸೆರ್‌ ಹೇಳಿದ್ದಾರೆ.

‘ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿ’ಯಲ್ಲಿ (ಬಿಎನ್‌ಎಚ್‌ಎಸ್‌) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಬೆಚ್ಚಿಬೀಳಿಸುವ ಕೆಲವು ಮಾಹಿತಿಗಳನ್ನು ನೀಡಿದ್ದಾರೆ...

*4 ಅಥವಾ 5ಜಾಗತಿಕ ಮಟ್ಟದ ಸಂಘಟಿತ ಅಪರಾಧಗಳಲ್ಲಿ, ವನ್ಯಸಂಪತ್ತಿನ ಅಕ್ರಮ ವಹಿವಾಟಿನ ಸ್ಥಾನ

*ಚೀನಾ ಅರಣ್ಯ ಸಂಪತ್ತಿನ ಅತಿದೊಡ್ಡ ಮಾರುಕಟ್ಟೆ

*ಆಫ್ರಿಕಾ ಆನೆಗಳು, ಭಾರತದ ಹುಲಿಗಳು, ಚಿರತೆಗಳು, ಖಡ್ಗಮೃಗ, ಪ್ಯಾಂಗೋಲಿನ್‌, ಮೀನುಗಳು... ಅಕ್ರಮ ದಂಧೆಯಿಂದಾಗಿ ಅಳಿವಿನಂಚಿಗೆ ಸಾಗುತ್ತಿರುವ ಪ್ರಾಣಿಗಳು

* 40ಸಾವಿರ ಪ್ರತಿ ವರ್ಷ ಹತ್ಯೆಯಾಗುವ ಆಫ್ರಿಕನ್‌ ಆನೆಗಳ ಸಂಖ್ಯೆ

* 4ಲಕ್ಷ ಉಳಿದಿರುವ ಆಫ್ರಿಕನ್‌ ಆನೆಗಳು

* 13ಲಕ್ಷ 1979ರಲ್ಲಿ ಇದ್ದ ಆಫ್ರಿಕನ್‌ ಆನೆಗಳ ಸಂಖ್ಯೆ

*ಅರಣ್ಯ ಸಂಪತ್ತಿನ ಅಕ್ರಮ ಸಾಗಾಣಿಕೆಯು ಮಾನವ ಕಳ್ಳಸಾಗಾಣಿಕೆ ಮತ್ತು ಮಾದಕ ವಸ್ತು ಸಾಗಾಣಿಕೆಗಳಷ್ಟೇ ದೊಡ್ಡ ಪ್ರಮಾಣದಲ್ಲಿದೆ.

* ಹೆಚ್ಚಿನ ಅಕ್ರಮ ಸಾಗಾಟಗಳು ವಿಶೇಷವಾಗಿ ಆನೆ ದಂತಗಳ ಸಾಗಾಟವು ಸಾಗರ ಮಾರ್ಗದಲ್ಲೇ ನಡೆಯುತ್ತದೆ.

ಡಾ. ಸ್ಯಾಮ್ಯುಯೆಲ್‌ ವಾಸೆರ್‌

ಡಾ. ವಾಸೆರ್‌ ಅವರು ವಾಷಿಂಗ್ಟನ್‌ ವಿಶ್ವವಿದ್ಯಾಲಯದಲ್ಲಿ ಸಂರಕ್ಷಣ ಜೀವಶಾಸ್ತ್ರ ವಿಭಾಗದ ನಿರ್ದೇಶಕರಾಗಿದ್ದಾರೆ.

ಆನೆಗಳ ಮಲದಿಂದ ಡಿಎನ್‌ಎ ಮಾದರಿ ಸಂಗ್ರಹಿಸಿ, ಆಫ್ರಿಕಾದ ಆನೆಗಳ ಸಮಗ್ರ ಮಾಹಿತಿಯನ್ನು ತಯಾರಿಸುವ ಮೂಲಕ ಇವರು ಜಗತ್ತಿನ ಗಮನ ಸೆಳೆದಿದ್ದರು. ಈ ಡಿಎನ್‌ಎ ಮಾದರಿಗಳ ಆಧಾರದಲ್ಲಿ, ಆನೆಯ ದಂತವು ಭೌಗೋಳಿಕವಾಗಿ ಯಾವ ಪ್ರದೇಶದಿಂದ ಬಂದಿದೆ ಎಂಬುದನ್ನು ಈಗ ಪತ್ತೆ ಮಾಡಲಾಗುತ್ತದೆ. ಯಾವ ಯಾವ ಪ್ರದೇಶಗಳಲ್ಲಿ ಆನೆಗಳ ಬೇಟೆ ನಡೆಯುತ್ತದೆ ಎಂಬುದನ್ನು ಪತ್ತೆ ಮಾಡಲು ಸಹ ಇವರ ಸಂಶೋಧನೆ ನೆರವಾಗಿದೆ. ಈ ಮಾರ್ಗವನ್ನು ಅನುಸರಿಸಿ ಅನೇಕ ಕಳ್ಳಸಾಗಾಣಿಕೆದಾರರನ್ನು ಬಂಧಿಸಲಾಗಿದೆ. ವಿಧಿ ವಿಜ್ಞಾನ ಪರೀಕ್ಷೆಯ ಮೂಲಕ ಮಾತ್ರ ಇಂಥ ಅಕ್ರಮಗಳನ್ನು ನಿಯಂತ್ರಿಸಲು ಸಾಧ್ಯ ಎಂದು ವಾಸೆರ್‌ ಪ್ರತಿಪಾದಿಸುತ್ತಾರೆ.

*‘ಭಾರತದಲ್ಲೂ ಆನೆಗಳು ಅಸ್ತಿತ್ವದ ಯುದ್ಧವನ್ನು ಸೋಲುತ್ತಿವೆ. ಹುಲಿಗಳ ಸ್ಥಿತಿ ಹೇಗಿದೆ ಎಂಬುದು ಗೊತ್ತೇ ಇದೆ’

–ಡಾ. ವಾಸೆರ್‌, ಸಂರಕ್ಷಣ ಜೀವಶಾಸ್ತ್ರ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT