ನೋಯ್ಡಾ: ಕಬ್ಬಿಣದ ಪೈಪ್‌ ಕುಸಿದು ವ್ಯಕ್ತಿ ಸಾವು

7

ನೋಯ್ಡಾ: ಕಬ್ಬಿಣದ ಪೈಪ್‌ ಕುಸಿದು ವ್ಯಕ್ತಿ ಸಾವು

Published:
Updated:

ನೋಯ್ಡಾ,ಉತ್ತರ ಪ್ರದೇಶ: ಇಲ್ಲಿನ ನಿರ್ಮಾಣ ಹಂತದ ಬಹುಮಹಡಿ ಕಟ್ಟಡವೊಂದಕ್ಕೆ ಅಳವಡಿಸಿದ್ದ ಕಬ್ಬಿಣದ ಪೈಪ್‌ಗಳು ಕುಸಿದು ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟು, ಆರು ಮಂದಿ ಗಾಯಗೊಂಡಿದ್ದಾರೆ.

‘ಬಿಪಿಟಿಪಿ ಕ್ಯಾಪಿಟಲ್‌ ಸಿಟಿ ಪ್ರದೇಶದಲ್ಲಿ ನಿರ್ಮಾಣ ಹಂತದ ಕಟ್ಟಡಕ್ಕೆ ಅಳವಡಿಸಿದ್ದ ಕಬ್ಬಿಣದ ಪೈಪ್‌ಗಳಿಗೆ ಮರಳು ತುಂಬಿದ್ದ ಟ್ರ್ಯಾಕ್ಟರ್‌ ಡಿಕ್ಕಿ ಹೊಡೆದ ಕಾರಣ ಪೈಪ್‌ಗಳು ಕುಸಿದು ಬಿದ್ದಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪೈಪ್‌ಗಳು ಕುಸಿದಾಗ ಮೇಲಿನ ಮಹಡಿಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕೂಡ ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ಟ್ರ್ಯಾಕ್ಟರ್‌ ಚಾಲಕ ಮೃತಪಟ್ಟಿದ್ದಾರೆ ಎಂದಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !