ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಮೂಲದ ಪತ್ತೆ: ನಿರ್ಣಯಕ್ಕೆ ಭಾರತದ ಬೆಂಬಲ

ಡಬ್ಲ್ಯೂಎಚ್‌ಒ ಸಮ್ಮೇಳನದಲ್ಲಿ 120 ದೇಶಗಳ ನಿಲುವಿಗೆ ಸಮ್ಮತಿ
Last Updated 18 ಮೇ 2020, 19:45 IST
ಅಕ್ಷರ ಗಾತ್ರ

ನವದೆಹಲಿ : ಕೊರೊನಾ ವೈರಸ್‌ ಮೂಲದ ಬಗ್ಗೆ ಪರಿಶೀಲನೆ ನಡೆಸುವ ನಿರ್ಣಯಕ್ಕೆ ಭಾರತ ಬೆಂಬಲ ವ್ಯಕ್ತಪಡಿಸಿದೆ.

ಜಿನೀವಾದಲ್ಲಿ ಆರಂಭವಾದ ಎರಡು ದಿನಗಳ ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲ್ಯೂಎಚ್‌ಒ) 73ನೇ ವಿಶ್ವ ಆರೋಗ್ಯ ಅಧಿವೇಶನದಲ್ಲಿ ಕೊರೊನಾ ವೈರಸ್‌ ಮೂಲದ ಪರಿಶೀಲನೆಗೆ ಸುಮಾರು 120 ದೇಶಗಳು ಬೆಂಬಲ ಸೂಚಿಸಿ ನಿರ್ಣಯ ಕೈಗೊಂಡಿವೆ. ಅಧಿವೇಶದನಲ್ಲಿ ಐರೋಪ್ಯ ಒಕ್ಕೂಟದ 27 ರಾಷ್ಟ್ರಗಳು ಕರಡು ನಿರ್ಣಯ ಮಂಡಿಸಿದ್ದವು.

ನಿರ್ಣಯಕ್ಕೆ ಬೆಂಬಲ ಸೂಚಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕದ ಹೆಸರು ಇಲ್ಲದಿರುವುದು ಅಚ್ಚರಿ ಮೂಡಿಸಿದೆ. ಚೀನಾದ ವುಹಾನ್‌ನಿಂದ ವೈರಸ್‌ ಹೇಗೆ ಹಬ್ಬಿತು ಎನ್ನುವ ಬಗ್ಗೆ ತನಿಖೆ ನಡೆಯಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಲವು ಬಾರಿ ಒತ್ತಾಯಿಸಿದ್ದರು.

ಜತೆಗೆ, ಕೊರೊನಾ ವೈರಸ್‌ ಮೊದಲು ಕಾಣಿಸಿಕೊಂಡ ಚೀನಾದ ಬಗ್ಗೆಯೂ ಈ ನಿರ್ಣಯದಲ್ಲಿ ಪ್ರಸ್ತಾಪಿಸಿಲ್ಲ.

ಇದೇ ಸಂದರ್ಭದಲ್ಲಿ ಕೊರೊನಾ ವೈರಸ್‌ಗೆ ಜಾಗತಿಕ ಪ್ರತಿಕ್ರಿಯೆ ಕುರಿತು ನಿಷ್ಪಕ್ಷಪಾತ, ಸ್ವತಂತ್ರ ಮತ್ತು ಸಮಗ್ರ ಮೌಲ್ಯಮಾಪನವನ್ನು ಡಬ್ಲ್ಯುಎಚ್‌ಒ ಸಮನ್ವಯದಲ್ಲಿ ಕೈಗೊಳ್ಳಬೇಕು ಎಂದು ಅಧಿವೇಶನದಲ್ಲಿ ಒತ್ತಾಯಿಸಲಾಗಿದೆ.

ಕೊರೊನಾವೈರಸ್‌ ಮೂಲದ ಪತ್ತೆ ಮಾಡಲು ವೈಜ್ಞಾನಿಕ ಮತ್ತು ಜಂಟಿ ಕಾರ್ಯಾಚರಣೆ ಅಗತ್ಯವಿದೆ. ಇದರಿಂದ, ಭವಿಷ್ಯದಲ್ಲಿ ಇಂತಹ ಅಪಾಯಕಾರಿ ಪರಿಸ್ಥಿತಿ ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆ ಮತ್ತು ಸಂಶೋಧನಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ಪ್ರಾಣಿಗಳಿಂದ ವೈರಸ್‌ ಹಬ್ಬುವ ಮೂಲದ ಪತ್ತೆ ನಡೆಸುವ ಕುರಿತು ವಿಶ್ವಸಂಸ್ಥೆಯ ಪ್ರಾಣಿಗಳ ಆರೋಗ್ಯ ಕುರಿತಾದ ಜಾಗತಿಕ ಸಂಸ್ಥೆ , ಆಹಾರ ಮತ್ತು ಕೃಷಿ ಸಂಸ್ಥೆ ಜತೆ ನಿರಂತರವಾಗಿ ಕಾರ್ಯನಿರ್ವಹಿಸುವುದಾಗಿ ಒಪ್ಪಿಗೆ ಸೂಚಿಸಲಾಗಿದೆ.

ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಯಾವ ರೀತಿ ಹೆಚ್ಚುವರಿ ಸಂಪನ್ಮೂಲಗಳನ್ನು ಹೊಂದಿಸಬೇಕು ಎನ್ನುವ ಬಗ್ಗೆಯೂ ಅಧಿವೇಶನದಲ್ಲಿ ಚರ್ಚೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT