ಭೋಪಾಲ್: ಮಧ್ಯಪ್ರದೇಶದ ಮನೆಯೊಂದರಲ್ಲಿ ನಡೆದ ತಿಥಿಯೂಟ ಕಾರ್ಯಕ್ರಮದಲ್ಲಿಭಾಗವಹಿಸಿದ್ದ 10 ಮಂದಿಗೆ ಕೋವಿಡ್ ರೋಗ ಇರುವುದಾಗಿ ದೃಢಪಟ್ಟಿದ್ದು, ಅವರ ಒಡನಾಡಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್ನಲ್ಲಿರಿಸಲಾಗಿದೆ.ತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರ ಸಂಪರ್ಕದಲ್ಲಿದ್ದ 26,000ಕ್ಕಿಂತಲೂ ಹೆಚ್ಚು ಜನರು ಮತ್ತು ಕುಟುಂಬದ ಸದಸ್ಯರನ್ನು ಕ್ವಾರಂಟೈನ್ನಲ್ಲಿರಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.