ರಾಮಮಂದಿರ ನಿರ್ಮಾಣ: ತಾಳ್ಮೆವಹಿಸಿ: ಯೋಗಿ ಆದಿತ್ಯನಾಥ ಮನವಿ

7

ರಾಮಮಂದಿರ ನಿರ್ಮಾಣ: ತಾಳ್ಮೆವಹಿಸಿ: ಯೋಗಿ ಆದಿತ್ಯನಾಥ ಮನವಿ

Published:
Updated:
Deccan Herald

ಲಖನೌ: ಅಯೋಧ್ಯೆಯಲ್ಲಿ ಬುಧವಾರ ಸಾಧುಗಳ ಸಮೂಹವನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ರಾಮಮಂದಿರ ನಿರ್ಮಾಣ ಕುರಿತು ‘ತಾಳ್ಮೆವಹಿಸಿ’ ಎಂದು ಮನವಿ ಮಾಡಿದ್ದಾರೆ. 

‘ಸರ್ಕಾರ ಸಂವಿಧಾನಕ್ಕೆ ಬದ್ಧವಾಗಿದೆ. ಸಂವಿಧಾನದ ಮಿತಿಯೊಳಗೆ ಸರ್ಕಾರ ನಿಮ್ಮ ಬೇಡಿಕೆಗೆ ಸಂಪೂರ್ಣ ಬೆಂಬಲಿಸುತ್ತದೆ’ ಎಂದು ಅವರು ಹೇಳಿದ್ದಾರೆ. 

ಸರಯೂ ನದಿ ತೀರದಲ್ಲಿ ರಾಮನ ಬೃಹತ್ ಪ್ರತಿಮೆ ನಿರ್ಮಿಸುವುದಾಗಿ ಘೋಷಿಸಿದ ಅವರು, ‘ಅಯೋಧ್ಯೆಯಲ್ಲಿ ರಾಮಮಂದಿರ ಹಿಂದೆ ಇತ್ತು, ಇಂದು ಇದೆ ಹಾಗೂ ಮುಂದೆಂದೂ ಇರಲಿದೆ’ ಎಂದಿದ್ದಾರೆ.

ಫೈಜಾಬಾದ್‌ ಆಗಲಿದೆ ಅಯೋಧ್ಯೆ
ಅಯೋಧ್ಯೆ (ಪಿಟಿಐ): ಈಚೆಗಷ್ಟೆ ಅಲಹಾಬಾದ್‌ ಅನ್ನು ಪ್ರಯಾಗ್‌ ರಾಜ್ ಎಂದು ಮರುನಾಮಕರಣ ಮಾಡಿದ ಬೆನ್ನಲ್ಲೇ, ಫೈಜಾಬಾದ್‌ ಜಿಲ್ಲೆಯನ್ನು ಅಯೋಧ್ಯೆ ಎಂದು ಬದಲಿಸುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಘೋಷಿಸಿದ್ದಾರೆ. 

‘ಅಯೋಧ್ಯೆ ನಮ್ಮ ಗೌರವ, ಹೆಮ್ಮೆ, ಪ್ರತಿಷ್ಠೆಯ ಸಂಕೇತ. ಅಯೋಧ್ಯೆಗೆ ಯಾರೂ ಅನ್ಯಾಯ ಮಾಡಲು ಸಾಧ್ಯವಿಲ್ಲ. ಈ ಪವಿತ್ರ ನಗರ ಭಗವಾನ್‌ ರಾಮನ ಜತೆಗೆ ಗುರುತಿಸಿಕೊಂಡಿದೆ’ ಎಂದು ಅವರು ಹೇಳಿದ್ದಾರೆ. 

ಇಲ್ಲಿನ ರಾಮಕಥಾ ಉದ್ಯಾನದಲ್ಲಿ ಆಯೋಜಿಸಿದ್ದ  ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ದೀಪೋತ್ಸವ ಹೊಸ ಸಂಪ್ರದಾಯ ಆರಂಭಿಸುವ ಸಂದರ್ಭ. ಅಯೋಧ್ಯೆಯಲ್ಲಿ ರಾಮನ ಹೆಸರಿನಲ್ಲಿ ಹೊಸ ವಿಮಾನ ನಿಲ್ದಾಣ ಹಾಗೂ ರಾಜ ದಶರಥನ
ಹೆಸರಿನಲ್ಲಿ ವೈದ್ಯಕೀಯ ಕಾಲೇಜ್ ನಿರ್ಮಿಸಲಾಗುವುದು’ ಎಂದು ಘೋಷಿಸಿದರು.

ಹಣತೆ ಬೆಳಗಿಸಿ ಗಿನ್ನಿಸ್ ದಾಖಲೆ ಸೃಷ್ಟಿ
ದೀಪಾವಳಿ ಸಂದರ್ಭದಲ್ಲಿ ಸರಯೂ ನದಿ ತೀರದಲ್ಲಿ 3 ಲಕ್ಷಕ್ಕೂ ಹೆಚ್ಚು ಮಣ್ಣಿನ ಹಣತೆಗಳನ್ನು ಬೆಳಗಿಸುವ ಮೂಲಕ ಹಿಂದಿನ ಗಿನ್ನಿಸ್ ದಾಖಲೆ ಮುರಿದು ಹೊಸ ದಾಖಲೆ ನಿರ್ಮಿಸಲಾಗಿದೆ. 

‘ಏಕಕಾಲಕ್ಕೆ 3,01,152 ದೀಪಗಳನ್ನು ಐದು ನಿಮಿಷ ಕಾಲ ಬೆಳಗಲಾಗಿದ್ದು, ಇದು ದಾಖಲೆ’ ಎಂದು ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್ಸ್‌ನ ರಿಷಿನಾಥ್ ತಿಳಿಸಿದ್ದಾರೆ. 

ಮೊದಲಿಗೆ 3.35 ಲಕ್ಷ ದೀಪಗಳನ್ನು ಬೆಳಗಿಸುವ ಗುರಿ ಇರಿಸಿಕೊಳ್ಳಲಾಗಿತ್ತು. ‘ಈ ಹಿಂದೆ 2016ರಲ್ಲಿ ಹರಿಯಾಣದಲ್ಲಿ 1,50,009 ದೀಪಗಳನ್ನು ಬೆಳಗಿಸಿದ ದಾಖಲೆ ಇತ್ತು. 
 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !