ಶುಕ್ರವಾರ, ಜನವರಿ 24, 2020
28 °C

ಪೊಲೀಸ್‌ ಶೂಗೆ ಮುತ್ತಿಕ್ಕಿದ ಸಂಸದ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ಪೊಲೀಸರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸಂಸದ ಗೋರಂಟ್ಲ ಮಾಧವ್‌ ಅವರು ಕರ್ತವ್ಯದಲ್ಲಿ ಸಾವಿಗೀಡಾದ ಸಿಬ್ಬಂದಿಯೊಬ್ಬರ ಶೂ ಪಾಲಿಷ್‌ ಮಾಡಿ ಮುತ್ತು ಕೊಟ್ಟಿದ್ದಾರೆ.

‘ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನನ್ನ ಬೂಟುಗಳನ್ನು ಪೊಲೀಸರು ನಾಲಿಗೆಯಿಂದ ನೆಕ್ಕುವಂತೆ ಮಾಡುತ್ತೇನೆ’ ಎಂದು ತೆಲುಗು ದೇಶಂ ಪಕ್ಷದ ನಾಯಕ ಜೆ.ಸಿ. ದಿವಾಕರ್‌ ರೆಡ್ಡಿ ಪಕ್ಷದ ಸಭೆಯಲ್ಲಿ ಹೇಳಿಕೆ ನೀಡಿದ್ದರು.

 ‘ದಿವಾಕರ ರೆಡ್ಡಿ ವಿರುದ್ಧ ನಾನು ಈ ಪ್ರತಿಭಟನೆ ವ್ಯಕ್ತಪಡಿಸಿದ್ದೇನೆ. ಜನರ ರಕ್ಷಣೆಗಾಗಿ ಪೊಲೀಸರು ತಮ್ಮ ಜೀವವನ್ನೇ ತ್ಯಾಗ ಮಾಡುತ್ತಾರೆ. ಅಹೋರಾತ್ರಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿ ದೇಶವನ್ನು ರಕ್ಷಿಸುತ್ತಾರೆ. ಇವರನ್ನು ಅಗೌರವಿಸುವುದು ಖಂಡನೀಯ’ ಎಂದು ಮಾಧವ್‌ ಹೇಳಿದ್ದಾರೆ. ಸಂಸದರಾಗಿ ಆಯ್ಕೆಯಾಗುವ ಮುನ್ನ ಮಾಧವ್‌ ಕದ್ರಿ ಠಾಣೆಯಲ್ಲಿ ಇನ್‌ಸ್ಪೆಕ್ಟರ್‌ ಆಗಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು