ಜಗದೀಶ್ ಶೆಟ್ಟರ್‌ರಿಂದ ₹ 60 ಕೋಟಿ ಆಮಿಷ: ಶಾಸಕ ಕೆ.ಎಂ.ಶಿವಲಿಂಗೇಗೌಡ ಆರೋಪ

7

ಜಗದೀಶ್ ಶೆಟ್ಟರ್‌ರಿಂದ ₹ 60 ಕೋಟಿ ಆಮಿಷ: ಶಾಸಕ ಕೆ.ಎಂ.ಶಿವಲಿಂಗೇಗೌಡ ಆರೋಪ

Published:
Updated:
Prajavani

ಹಾಸನ: ‘ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್‌ ಶಾಸಕ ಗೌರಿಶಂಕರ್ ಅವರಿಗೆ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್‌ ಕರೆ ಮಾಡಿ ₹ 60 ಕೋಟಿ ನಗದು ಹಾಗೂ ಸಚಿವ ಸ್ಥಾನ ನೀಡುವುದಾಗಿ ಆಮಿಷ ಒಡ್ಡಿದ್ದಾರೆ. ಗೌರಿಶಂಕರ್‌ ಅವರೇ ನನಗೆ ಕರೆ ಮಾಡಿ ಈ ವಿಷಯ ತಿಳಿಸಿದ್ದಾರೆ’ ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ಸಚಿವ ಎಚ್‌.ಡಿ.ರೇವಣ್ಣ ಜೊತೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವಿಷಯವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಗಮನಕ್ಕೂ ತರಲಾಗಿದೆ ಎಂದರು.

‘ರಾಜ್ಯದ 166 ತಾಲ್ಲೂಕು ಬರಕ್ಕೆ ಸಿಲುಕಿವೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಜೊತೆ ಬಿಜೆಪಿ ನಾಯಕರು ಚರ್ಚಿಸಿ ಕೇಂದ್ರದಿಂದ ಅನುದಾನ ತರಲು ಒಟ್ಟಾಗಿ ಪ್ರಯತ್ನಿಸುತ್ತಿಲ್ಲ. ಆರು ತಿಂಗಳಿಂದ ಸರ್ಕಾರ ಬೀಳಿಸಲು ವ್ಯರ್ಥ ಪ್ರಯತ್ನ ಮಾಡುವುದರಲ್ಲೇ ನಿರತರಾಗಿದ್ದಾರೆ’ ಎಂದು ಎಚ್‌.ಡಿ.ರೇವಣ್ಣ ಟೀಕಿಸಿದರು.

ಹೊಸದಾಗಿ ಆಯ್ಕೆಯಾಗಿರುವ ಶಾಸಕರನ್ನು ಕರೆದುಕೊಂಡು ದೆಹಲಿ, ಮಹಾರಾಷ್ಟ್ರ ಪ್ರವಾಸ ಮಾಡುತ್ತಿದ್ದಾರೆ. ಅಲ್ಲಿನ ಖಾಸಗಿ ಹೋಟೆಲ್‌ಗಳಲ್ಲಿ ಖರ್ಚು ಮಾಡುವ ಹಣವನ್ನು ರಾಜ್ಯದ ತೀವ್ರ ಬರಗಾಲ ಇರುವ ತಾಲ್ಲೂಕುಗಳಿಗಾದರೂ ನೀಡಲಿ’ ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !