ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 10 ಹೊಸ ಕೋವಿಡ್‌–19 ಪ‍್ರಕರಣ: 207ಕ್ಕೆ ಏರಿದ ಸೋಂಕಿತರ ಸಂಖ್ಯೆ 

Last Updated 10 ಏಪ್ರಿಲ್ 2020, 8:09 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ರಾಜ್ಯದಲ್ಲಿಶುಕ್ರವಾರ 10 ಹೊಸ ಕೋವಿಡ್‌ 19 ಪ್ರಕರಣಗಳು ದೃಢವಾಗಿದ್ದು, ಸೋಂಕಿತರ ಸಂಖ್ಯೆ 207ಕ್ಕೆ ಏರಿಕೆಯಾಗಿದೆ.

ಮೈಸೂರಿನಲ್ಲಿ 5 ಮಂದಿಯಲ್ಲಿ ಕೋವಿಡ್–19 ಪತ್ತೆ

ಮೈಸೂರು: ಮೈಸೂರಿನಲ್ಲಿ ಹೊಸದಾಗಿ ಶುಕ್ರವಾರ 5 ಮಂದಿಯಲ್ಲಿ ಕೋವಿಡ್–19 ಕಾಣಿಸಿಕೊಂಡಿದೆ. ಇದರಲ್ಲಿ 8 ವರ್ಷದ ಒಂದು ಮಗು ಸಹ ಸೇರಿದೆ. ಇವರೆಲ್ಲರೂ ನಂಜನಗೂಡಿನ ಔಷಧ ತಯಾರಿಕಾ ಕಂಪನಿಯ ಉದ್ಯೋಗಿಗಳು, ಅವರ ಕುಟುಂಬದವರೇ ಆಗಿದ್ದಾರೆ.

ಕಲಬುರ್ಗಿಯಲ್ಲಿ ಮತ್ತೊಬ್ಬರಿಗೆ ಕೋವಿಡ್ 19

ಕಲಬುರ್ಗಿ: ನಗರದ 55 ವರ್ಷದ ವ್ಯಕ್ತಿಯೊಬ್ಬರಿಗೆ ಕೋವಿಡ್ 19 ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 10ಕ್ಕೇರಿದಂತಾಗಿದೆ.ಅವರ ಪೈಕಿ ಈಗಾಗಲೇ ಇಬ್ಬರು ಕೊನೆಯುಸಿರೆಳೆದಿದ್ದಾರೆ.

ದೆಹಲಿಯ ನಿಜಾಮುದ್ದೀನ್ ದರ್ಗಾ ಬಳಿ ತಬ್ಲಿಗಿ ಸಂಘಟನೆಯ ಸಮಾವೇಶದಲ್ಲಿ ಭಾಗವಹಿಸಿ ‌ನಗರಕ್ಕೆ ವಾಪಸಾದ ವ್ಯಕ್ತಿಯಿಂದ ಈ ವ್ಯಕ್ತಿಗೆ ಕೋವಿಡ್ ಹರಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT