ಶುಕ್ರವಾರ, ಜೂನ್ 5, 2020
27 °C

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಏಳು ಜನರಿಗೆ ಕೋವಿಡ್‌ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಜಿಲ್ಲೆಯಲ್ಲಿ ಶುಕ್ರವಾರ ಏಳು ಜನರಿಗೆ ಕೋವಿಡ್-19 ಸೊಂಕು ತಗುಲಿರುವುದು ದೃಡಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 68ಕ್ಕೆ ಏರಿಕೆಯಾಗಿದೆ.

ನಗರದ ಕಂಟೈನ್ಮೆಂಟ್‌ ಪ್ರದೇಶದ 33 ಮತ್ತು 34 ವರ್ಷ ವಯಸ್ಸಿನ ಇಬ್ಬರು ಪುರುಷರಿಗೆ ಸೋಂಕು ತಗುಲಿದೆ. ಇನ್ನುಳಿದ ಐವರಿಗೆ ಮಹಾರಾಷ್ಟ್ರ ಸಂಪರ್ಕದಿಂದ ಬಂದಿರುವುದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದ್ದಾರೆ.

15 ವರ್ಷ ವಯಸ್ಸಿನ ಬಾಲಕಿ, 20 ವರ್ಷ ವಯಸ್ಸಿನ ಯುವಕ, 29 ಮತ್ತು 36 ವರ್ಷ ವಯಸ್ಸಿನ ಇಬ್ಬರು ಮಹಿಳೆಯರಿಗೆ ಹಾಗೂ 30 ವರ್ಷ ವಯಸ್ಸಿನ ಪುರುಷಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.

ಮಹಿಳೆ ಗುಣಮುಖ: ಕೋವಿಡ್-19 ಸೋಂಕಿನಿಂದ ಗುಣಮುಖರಾದ 35 ವರ್ಷ ವಯಸ್ಸಿನ ಮಹಿಳೆ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 42ಕ್ಕೆ ಏರಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು