ಮಂಗಳವಾರ, ಮೇ 26, 2020
27 °C

ನಂಜನಗೂಡಿನಲ್ಲಿ ಕಟ್ಟೆಚ್ಚರ: ಮನೆಯಲ್ಲೇ ಇರಲು 950 ಮಂದಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿ ಭಾನುವಾರ ಕಟ್ಟೆಚ್ಚರ ವಹಿಸಲಾಗಿದೆ.

ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಪಟ್ಟಣ ಸಂಪರ್ಕಿಸುವ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಒಂದೇ ದಿನ 5 ಕೊರೊನಾ ಸೋಂಕು ಪತ್ತೆಯಾದ್ದರಿಂದ ಹಾಗೂ 950 ಮಂದಿಯನ್ನು ಮನೆಯಲ್ಲಿಯೆ ನಿಗಾ ವಹಿಸಲು ಹೇಳಿರುವುದರಿಂದ ಇಡೀ‌ ಪಟ್ಟಣ ಸ್ತಬ್ದಗೊಂಡಿದೆ. ಅಗತ್ಯ ಸಾಮಗ್ರಿ ಖರೀದಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಗಾಳಿಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿವೆ. ಸೋಂಕಿತರು ಪತ್ತೆಯಾದ ಕಾರ್ಖಾನೆಯ ಮೂವರು ಕಾರ್ಮಿಕರಲ್ಲಿ ಜ್ವರ ಕಂಡು ಬಂದಿದ್ದು ಅವರನ್ನು ರಾತ್ರೋ ರಾತ್ರಿ ಮೈಸೂರಿಗೆ ಕರೆದುಕೊಂಡು ಹೋಗಲಾಗಿದೆ ಎಂಬ ಸುದ್ದಿ ಹರಡಿ ಜನರು ಇನ್ನಷ್ಟು ತಳಮಳಗೊಂಡಿದ್ದಾರೆ. ಕೆಲವೆಡೆ ಹಾಲಿನ ಅಂಗಡಿಗಳನ್ನು ತೆರೆಯಲೂ ವರ್ತಕರು ಹಿಂದೇಟು ಹಾಕಿದ್ದಾರೆ.  ತಹಶೀಲ್ದಾರ್ ಅವರು ಸಭೆ ಕರೆದಿದ್ದು,ಇನ್ನಷ್ಟು ಬಿಗಿಕ್ರಮಗಳನ್ನು ಜಾರಿಗೊಳಿಸುವ ನಿರೀಕ್ಷೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು