ದೇವನಹಳ್ಳಿ: ಕಾನೂನು ಬಾಹಿರವಾಗಿ ಮಾಡಿಸಿಕೊಂಡಿದ್ದ ಪೋಡಿ ವಜಾ ಮಾಡಲು ಕೋರಿದ್ದ ಅರ್ಜಿದಾರರಿಂದ ₹15 ಸಾವಿರ ಲಂಚ ಪಡೆಯುತ್ತಿದ್ದ ಆರೋಪದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸರ್ವೆಯರ್ ಒಬ್ಬರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ.
ದೇವನಹಳ್ಳಿ ತಾಲ್ಲೂಕು ಎಡಿಎಲ್‌ಆರ್ ಕಚೇರಿಯ ಸರ್ವೆಯರ್ ಎಚ್.ಆರ್.ಲಕ್ಷ್ಮಣ್ ಅವರನ್ನು ಬಂಧಿಸಲಾಗಿದೆ. ಸೋಲೂರು ಗ್ರಾಮದ ನಿವಾಸಿಯೊಬ್ಬರು ಗೋಮಾಳ ಜಮೀನಿನಲ್ಲಿ 2 ಎಕರೆಯನ್ನು 2008ರಲ್ಲಿ ಕಾನೂನು ಬಾಹಿರವಾಗಿ ಪೋಡಿ ಮಾಡಿಸಿಕೊಂಡಿದ್ದರು. ಅದನ್ನು ವಜಾ ಮಾಡುವಂತೆ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಈ ಕೆಲಸಕ್ಕೆ ₹15 ಸಾವಿರ ಲಂಚದ ಬೇಡಿಕೆಯನ್ನು ಸರ್ವೆಯರ್ ಇಟ್ಟಿದ್ದರು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.