ಗುರುವಾರ , ಫೆಬ್ರವರಿ 27, 2020
19 °C

ಕಲಬುರ್ಗಿಯಲ್ಲಿ ಭೀಕರ ಅಪಘಾತ: ಇಬ್ಬರು ಮಕ್ಕಳು ಸೇರಿ ಐವರ ದುರ್ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಆಳಂದ ರಸ್ತೆಯ ಸಾವಳಗಿ ಕ್ರಾಸ್ ಹತ್ತಿರ ಇಂದು ಮುಂಜಾನೆ ಸ್ಕಾರ್ಪಿಯೊ ಮತ್ತು ಲಾರಿ‌ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತಪಟ್ಟವರು ಮಹಾರಾಷ್ಟ್ರದ ದಕ್ಷಿಣ ಸೊಲ್ಲಾಪುರ ತಾಲ್ಲೂಕಿನ ಚಿಂಚಪೂರದವರು. ತಿರುಪತಿಗೆ ಹೋಗಿ ಮರಳುತ್ತಿದ್ದ ವೇಳೆಯಲ್ಲಿ ಅಪಘಾತ ಸಂಭವಿಸಿದೆ. 

ಸಂಜಯ್ ಕುಮಾರ್ (29) , ರಾಣಿ ಸಂಜಯ್ (26) ಭಾಗ್ಯಶ್ರೀ (22) , ಶ್ರೇಯಸ್ (3) ಧೀರಜ್ ಸಂಗಣ್ಣ (2) ಸ್ಥಳದಲ್ಲೇ ಸಾವಿಗೀಡಾದರು.

ಶಿವರಾಜ್, ಶೀತಲ್ ಸಂಗಣ್ಣ, ಭೀಮಾಶಂಕರ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು