ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆಜಾನ್‌ ಖಾತೆ ಹ್ಯಾಕ್‌, ₹1.80 ಲಕ್ಷ ವಂಚನೆ

Last Updated 11 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಹೊಸಪೇಟೆ: ಅಮೆಜಾನ್‌ ಖಾತೆ ಹ್ಯಾಕ್‌ ಮಾಡಿ, ಗ್ರಾಹಕರೊಬ್ಬರ ಬ್ಯಾಂಕ್‌ ಖಾತೆಯಿಂದ ₹1.80 ಲಕ್ಷ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿನ ಗವಿಸಿದ್ದೇಶ್ವರ ನಗರದ ನಿವಾಸಿ ಡಿ. ಹರೀಶಕುಮಾರ್‌ ವಂಚನೆಗೆ ಒಳಗಾದವರು. ಜಿಂದಾಲ್‌ ಉದ್ಯೋಗಿಯಾಗಿರುವ ಇವರು ನಗರದ ಆ್ಯಕ್ಸಿಸ್‌ ಬ್ಯಾಂಕ್‌ ಶಾಖೆಯಲ್ಲಿ ಖಾತೆ ಹೊಂದಿದ್ದಾರೆ. ಡಿ. 2ರಂದು ಉಳಿತಾಯ ಖಾತೆಯಲ್ಲಿ ಹಣದ ಮೊತ್ತ ಪರಿಶೀಲಿಸಿದಾಗ ಒಟ್ಟು ₹2.20 ಲಕ್ಷ ಇತ್ತು. ಡಿ. 3ರಂದು ಮಧ್ಯಾಹ್ನ 3ಗಂಟೆ 16 ನಿಮಿಷಕ್ಕೆ ಇವರ ಮೊಬೈಲ್‌ಗೆ ಒ.ಟಿ.ಪಿ. ಬಂದು ₹30,000 ಸಾವಿರ ಖಾತೆಯಿಂದ ಕಡಿತವಾಗುತ್ತದೆ. ಅದಾದ ಬಳಿಕ ಮೂರು ಸಲ ತಲಾ ₹50,000 ಕಡಿತಗೊಳ್ಳುತ್ತದೆ. 3ಗಂಟೆ 29 ನಿಮಿಷಕ್ಕೆ ಕೊನೆಯದಾಗಿ ಹಣ ಕಡಿತವಾಗುತ್ತದೆ. ಒಟ್ಟು ₹1.80 ಲಕ್ಷ ಹಣ ಅವರ ಖಾತೆಯಿಂದ ಡ್ರಾ ಆಗುತ್ತದೆ.

‘ಈ ವಿಷಯ ಗೊತ್ತಾಗಿ ಹರೀಶಕುಮಾರ್‌ ಅವರು ತೋರಣಗಲ್‌ ಸಮೀಪದ ಜಿಂದಾಲ್‌ನಲ್ಲಿರುವ ಆ್ಯಕ್ಸಿಸ್‌ ಬ್ಯಾಂಕ್‌ ಶಾಖೆಗೆ ದೂರು ಕೊಡುತ್ತಾರೆ. ಇದರಿಂದಾಗಿ ಬ್ಯಾಂಕಿನವರು ತಾತ್ಕಾಲಿಕವಾಗಿ ಅವರ ಖಾತೆಯನ್ನು ನಿಷ್ಕ್ರಿಯಗೊಳಿಸುತ್ತಾರೆ. ಅವರ ಖಾತೆಯಿಂದ ಡ್ರಾ ಮಾಡಿದ ಹಣದಿಂದ, ಹರೀಶಕುಮಾರ್‌ ಅವರ ಅಮೆಜಾನ್‌ ಖಾತೆಯಿಂದ ಗಿಫ್ಟ್‌ ಕಾರ್ಡ್‌ಗಳನ್ನು ಖರೀದಿಸಲಾಗುತ್ತದೆ. ಅದನ್ನು ತಿಳಿದು, ಹರೀಶಕುಮಾರ್‌, ಅಮೆಜಾನ್‌ ಕಾಲ್‌ ಸೆಂಟರ್‌ಗೆ ಕರೆ ಮಾಡಿ, ವಿಷಯ ತಿಳಿಸಿ ವಹಿವಾಟು ತಡೆ ಹಿಡಿಸಿದ್ದಾರೆ. ಇನ್ನಷ್ಟೇ ಅವರ ಖಾತೆಗೆ ಹಣ ಜಮೆ ಆಗಬೇಕಿದೆ’ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

ಈ ಕುರಿತು ಗಾದಿಗನೂರು ಪೊಲೀಸ್‌ ಠಾಣೆಯಲ್ಲಿ ಡಿ. 10ರಂದು ಪ್ರಕರಣ ದಾಖಲಾಗಿದೆ. ಹರೀಶಕುಮಾರ್‌ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT